ಚಳ್ಳಕೆರೆ: ಗಾರೆ ಕೆಲಸ ಮಾಡುವ ಕಾರ್ಮಿಕನ ಪುತ್ರಿ, ತಾಲ್ಲೂಕಿನ ಸಾಣಿಕೆರೆಯ ವೇದ ಶಾಲೆಯ ವಿದ್ಯಾರ್ಥಿನಿ ಜೆ.ಬೃಂದಾ 618 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಹಿರಿಯೂರು ತಾಲ್ಲೂಕಿನ ಸಾಲುಹುಣಸೆ ಗ್ರಾಮದವರು.

ಅವರ ತಂದೆ ಎಚ್.ಜುಂಜೇಶ್ ಗಾರೆ ಕೆಲಸ ಮಾಡುತ್ತಿದ್ದು, ತಾಯಿ ಮಂಜುಳಾ ಮನೆ ನಿರ್ವಹಿಸಿಕೊಂಡು ಮಗಳನ್ನು ಓದಿಸುತ್ತಿದ್ದಾರೆ. ಬೃಂದಾ 10ನೇ ತರಗತಿಯನ್ನು ವಸತಿ ಶಾಲೆಯಲ್ಲಿ ಇದ್ದುಕೊಂಡು ಈ ಸಾಧನೆ ಮಾಡಿದ್ದಾರೆ.

‘ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದುವ ಮಗಳ ಆಸೆಗೆ ನೀರೆರೆಯುತ್ತೇವೆ. ಮಗಳನ್ನು ವೈದ್ಯೆಯನ್ನಾಗಿ ಮಾಡಬೇಕು ಎಂಬ ಆಸೆ ಇದೆ. ಪುತ್ರ ಚರಣ್ ಎಂಬಿಬಿಎಸ್ ಓದಬೇಕು ಎಂಬ ಆಸೆ ಹೊಂದಿದ್ದ. ಆದರೆ ಅದು ಈಡೇರದೆ ಆಯುರ್ವೇದ (ಬಿಎಎಂಎಸ್) ಓದುತ್ತಿದ್ದಾನೆ. ಮಗಳ ಮೂಲಕ ಆ ಆಸೆಯನ್ನು ಈಡೇರಿಕೊಳ್ಳಬೇಕೆಂದಿದ್ದೇವೆ’ ಎಂದು ಜುಂಜೇಶ್ ‘ಪ್ರಜಾವಾಣಿ’ಯೊಂದಿಗೆ ಮಗಳ ಭವಿಷ್ಯ– ಸಾಧನೆಯ ಬಗ್ಗೆ ಹಂಚಿಕೊಂಡರು.

‘ಶಾಲೆಯಲ್ಲಿ ಕಲಿಕೆಯ ಜೊತೆಗೆ ಹೆಚ್ಚುವರಿಯಾಗಿ ದಿನಕ್ಕೆ 3 ಗಂಟೆ ಓದುತ್ತಿದ್ದೆ. ಅಪ್ಪ– ಅಮ್ಮನ ಆಸೆ ಈಡೇರಿಸುವ ಕನಸಿದೆ’ ಎಂದು ಬೃಂದಾ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1466387311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.