ಚಾಮರಾಜನಗರ: 2025–26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು ಚಾಮರಾಜನಗರ ಜಿಲ್ಲೆ 30ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಜಿಲ್ಲೆ 27ನೇ ಸ್ಥಾನ ಪಡೆದುಕೊಂಡಿತ್ತು. ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡರೂ ಮೂರು ಸ್ಥಾನ ಕುಸಿದಿದೆ.

ಫಲಿತಾಂಶ ಪ್ರಮಾಣ ಹೆಚ್ಚಳ: ಜಿಲ್ಲೆ ಪ್ರಸಕ್ತ ವರ್ಷ ಶೇ 91.89ರಷ್ಟು ಫಲಿತಾಂಶ ಪಡೆದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 83.16) ಶೇ 8.73ರಷ್ಟು ಸುಧಾರಣೆ ಕಂಡಿದೆ. ಈ ಬಾರಿ ಜಿಲ್ಲೆಯಿಂದ 10544 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 9,424 ಮಂದಿ ಉತ್ತೀರ್ಣರಾಗಿದ್ದಾರೆ.

ರಿಷಿತಾ, ನಿಹಾರಿಕಾ ಟಾಪರ್: ಕೊಳ್ಳೇಗಾಲ ತಾಲ್ಲೂಕಿನ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಎಂ.ರಿಷಿತಾ 623 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಆದರ್ಶ ವಿದ್ಯಾಲಯದ ನಿಹಾರಿಕಾ ಹಾಗೂ ವಾಸವಿ ವಿದ್ಯಾಕೇಂದ್ರದ ಸಿಂಚನಾ ಸತೀಶ್ ತಲಾ 620 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಕೊಳ್ಳೇಗಾಲದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಎನ್.ದೀಪಿಕಾ 619 ಅಂಕಗಳೊಂದಿಗೆ ತೃತೀಯ, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಆರ್.ಪ್ರತಿಭಾ, ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ತನ್ಮಯ್, ಹನೂರು ತಾಲ್ಲೂಕಿನ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಬರಿ ತಲಾ 618 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಬಾಲಕಿಯರೇ ಮೇಲುಗೈ: ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಶೇ 94.91 ಫಲಿತಾಂಶ ಪಡೆದಿದ್ದಾರೆ. ಬಾಲಕರಿಗೆ ಶೇ 87.48 ಫಲಿತಾಂಶ ಸಿಕ್ಕಿದೆ.

ಕನ್ನಡ ಮಾಧ್ಯಮ ಮುಂದು: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶೇ 96.95ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ ಶೇ 87.98ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಖಾಸಗಿ ಶಾಲೆ ಮೊದಲು: ಪರೀಕ್ಷೆ ಬರೆದಿದ್ದ ಖಾಸಗಿ ಶಾಲೆಗಳ 2,800 ವಿದ್ಯಾರ್ಥಿಗಳ ಪೈಕಿ 2,714 ಮಂದಿ ಉತ್ತೀರ್ಣರಾಗಿದ್ದು ಶೇ 96.93ರಷ್ಟು ಫಲಿತಾಂಶ ಸಿಕ್ಕಿದೆ, ಅನುದಾನಿತ ಶಾಲೆಗಳಿಂದ ಪರೀಕ್ಷೆಗೆ ಹಾಜರಾಗಿದ್ದ 2,611 ವಿದ್ಯಾರ್ಥಿಗಳಲ್ಲಿ 2,335 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ 89.43 ಫಲಿತಾಂಶ ದೊರೆತಿದೆ. ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದಿದ್ದ 5,133 ವಿದ್ಯಾರ್ಥಿಗಳ ಪೈಕಿ 4,575 ಮಂದಿ ಪಾಸ್ ಆಗಿದ್ದು ಶೇ 89.13 ಫಲಿತಾಂಶ ಲಭಿಸಿದೆ.

ನಗರ ಪ್ರದೇಶ ಮುಂದು: ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 92.64 ಫಲಿತಾಂಶ ಪಡೆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ 90.45 ಪಡೆದುಕೊಂಡಿದ್ದಾರೆ.

ಕೊಳ್ಳೇಗಾಲ ಟಾಪರ್: ಜಿಲ್ಲೆಯಲ್ಲಿ ಕೊಳ್ಳೇಗಾಲ ತಾಲ್ಲೂಕು ಮೊದಲ ಸ್ಥಾನ (ಶೇ 96.13) ಪಡೆದುಕೊಂಡಿದ್ದು, ಹನೂರು (ಶೇ 95.98) ದ್ವಿತೀಯ, ಗುಂಡ್ಲುಪೇಟೆ (ಶೇ 93.03) ತೃತೀಯ, ಯಳಂದೂರು (ಶೇ 92.23) ನಾಲ್ಕನೇ ಹಾಗೂ ಚಾಮರಾಜನಗರ (ಶೇ 84.48) ಕೊನೆಯ ಸ್ಥಾನ ಪಡೆದುಕೊಂಡಿದೆ.

ಶೇ 100 ಫಲಿತಾಂಶ: ಜಿಲ್ಲೆಯಲ್ಲಿ ಈ ಬಾರಿ 59 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ.

ಚಾಮರಾಜನಗರ- ಎಂಸಿಎಸ್ ಸೋಮವಾರಪೇಟೆ, ಚನ್ನಬಸವೇಶ್ವರ ಶಾಲೆ ಹರವೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹರದನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿಯುತ ಶಾಲೆ ಹರದನಹಳ್ಳಿ, ಇನ್ಫಿನಿಟಿ ಶಾಲೆ ಸಂತೆಮರಹಳ್ಳಿ, ಲೋಟಸ್ ಶಾಲೆ, ಹುದಾ ಪಬ್ಲಿಕ್ ಶಾಲೆ, ಎಂಇಟಿ ಎಚ್ಎಸ್, ಎಂವೈಎಫ್ ಎಚ್ಎಸ್, ಕ್ರೆಸೆಂಟ್ ಅಕಾಡೆಮಿ.

ಗುಂಡ್ಲುಪೇಟೆ- ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಹಂಗಳ, ಜೆಎಸ್ಎಸ್ ಶಿವಪುರ, ಎಸ್ಕೆಜಿಪಿಯುಸಿ ಕಬ್ಬಳ್ಳಿ, ಜೆಎಸ್ಎಸ್ ತೆರಕಣಾಂಬಿ, ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ತೆರಕಣಾಂಬಿ, ಲಿಟಲ್ ಫ್ಲವರ್ ಸ್ಕೂಲ್ ಬೇಗೂರು, ಆಕ್ಸ್ಫರ್ಡ್ ಪಬ್ಲಿಕ್ ಶಾಲೆ ಯಡವನಹಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿಯುತ ಶಾಲೆ, ಸೇಂಟ್ ಜಾನ್ಸ್ ಶಾಲೆ, ನಿರ್ಮಲಾ ಕಾನ್ವೆಂಟ್, ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆ ಮಾನಸ ವಿದ್ಯಾಲಯ, ಆದರ್ಶ ವಿದ್ಯಾಲಯ–2, ಮುದ್ದಾನೇಶ್ವರ ಶಾಲೆ.

ಕೊಳ್ಳೇಗಾಲ- ಹೊಸ ಮಾಲಂಗಿ, ಶ್ರೀ.ಜಿ.ವಿ.ಗೌಡ ಸ್ಮಾರಕ ಶಾಲೆ ಕೊತ್ತನೂರು, ಸೆವೆಂತ್ ಡೇ ಅಡ್ವೆನ್ಸಿಟಿಸ್ಟ್, ಅನುದಾನಿತ ಮಹದೇಶ್ವರ ಬಾಲಕಿಯರ ಶಾಲೆ ಕಾಮಗೆರೆ, ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆ ಕಾಮಗೆರೆ, ಸೇಂಟ್ ಅಗಸ್ಟಿನ್ಸ್ ಪಾಸ್ಕಲ್ ಶಾಲೆ, ನಿಸರ್ಗ ವಿದ್ಯಾಸಂಸ್ಥೆ ಸಿಂಗಾನಲ್ಲೂರು, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿಶಾಲೆ, ಸಿದ್ದಾಪ್ಪಜಿ ಹೊಸಮಠ, ಭವನ್ಸ್ ಗೀತಾ ವಿದ್ಯಾಲಯ, ಸೇಂಟ್ ಫ್ರಾನ್ಸಿಸ್ ಅಸಿಸಿ ಶಾಲೆ, ಆದರ್ಶ ವಿದ್ಯಾಲಯ, ಲಯನ್ಸ್ ಶಾಲೆ, ಸಹನಾ ಶಾಲೆ.

ಯಳಂದೂರು- ಮೊರಾರ್ಜಿ ದೇಸಾಯಿ ಶಾಲೆ ಬಿ.ಆರ್. ಹಿಲ್ಸ್, ಸರ್ಕಾರಿ ಪ್ರೌಢಶಾಲೆ ಮದ್ದೂರು.

ಹನೂರು- ಜಿಎಚ್ಎಸ್ ಕೌದಳ್ಳಿ, ಸೇಂಟ್ ಅಂಥೋಣಿ ಶಾಲೆ ಕೌದಳ್ಳಿ, ಸೇಂಟ್ ಅಂಥೋಣಿ ಇಂಗ್ಲೀಷ್ ಮಾಧ್ಯಮ ಶಾಲೆ, ಮೊರಾರ್ಜಿ ದೇಸಾಯಿ ಶಾಲೆ ಆರ್.ಎಸ್.ದೊಡ್ಡಿ, ಮೊರಾರ್ಜಿ ದೇಸಾಯಿ ಶಾಲೆ, ಏಕಲವ್ಯ ಮಾದರಿ ವಸತಿಶಾಲೆ ಮಂಗಳ, ಸೇಂಟ್ ಮೇರಿ ಪ್ರೌಢಶಾಳೆ ಮಾರ್ಟಳ್ಳಿ, ಶ್ರೀಸಾಲೂರು ಸ್ವಾಮಿ ಕೃಪಾ ಶಾಲೆ, ಇಂದಿರಾ ಗಾಂಧಿ ವಸತಿಯುತ ಶಾಲೆ ರಾಮಾಪುರ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಜಿಎಚ್ಎಸ್ ಮಣಗಳ್ಳಿ, ಸೇಂಟ್ ಥಾಮಸ್ ಶಾಲೆ, ಕ್ರಿಸ್ತರಾಜ ಶಾಲೆ, ಕ್ರಿಸ್ತರಾಜ ಇಂಗ್ಲಿಷ್ ಶಾಲೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-37-329717460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.