ಚಿಕ್ಕಜಾಜೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಅಕ್ಷರ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ.

ಶಾಲೆಯ ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 48 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 12 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸ್.ಸಿ. ಭವ್ಯಾ 614 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎನ್.ಜಿ. ಅನನ್ಯಾ 610, ಟಿ. ಕಿರಣ್ ನಾಯ್ಕ 610, ಪಿ.ಬಿ. ಸಂಜನಾ 601, ಜಿ.ಪಿ. ತನು 600, ಜಿ.ಎಸ್. ಮಾನ್ಯ 599, ಕೆ. ಸುಜಲ್ 599, ಕೆ.ಬಿ ಗಗನ, ಸಿ.ಟಿ. ಚಿನ್ಮಯಮೂರ್ತಿ ಹಾಗೂ ಎಚ್.ಎಂ. ಸಹನಾ 595, ಎಚ್.ಪಿ. ವೀರಭದ್ರಸ್ವಾಮಿ 593, ಎನ್. ವೇದಾ 584 ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಮುಖ್ಯಸ್ಥರಾದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ಶಾಲಾ ಸಂಯೋಜಕ ಮಣೀಶ್ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ಎಚ್.ಎಂ. ಸ್ವಾಮಿ ಅಭಿನಂದಿಸಿದ್ದಾರೆ.

ಎಸ್.ಸಿ. ಭವ್ಯ ಶಾಲೆಗೆ ಟಾಪರ್ ಆಗಿದ್ದು, ತಾಯಿ ಎಂ. ಸುಮಾ ಟೈಲರಿಂಗ್ ವೃತ್ತಿ ಮಾಡಿ ಮಗಳ ಓದಿಗೆ ಬೆಂಬಲ ನೀಡಿದ್ದಾರೆ.

610 ಅಂಕ ಪಡೆದಿರುವ ಇದೇ ಶಾಲೆಯ ಟಿ. ಕಿರಣ್ ನಾಯ್ಕ ಸಮೀಪದ ಐಯ್ಯನಹಳ್ಳಿ ಗ್ರಾಮದ ಕೃಷಿ ಕಾರ್ಮಿಕರಾದ ತಿಪ್ಪೇಸ್ವಾಮಿ ನಾಯ್ಕ ಹಾಗೂ ಎಚ್.ಡಿ. ಜ್ಯೋತಿ ದಂಪತಿ ಪುತ್ರ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-44-339359824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.