ಚಿಕ್ಕಮಗಳೂರು: ‘ತಂದೆ–ತಾಯಿ ಟೈಲರ್ ವೃತ್ತಿ ಮಾಡಿಕೊಂಡು ಕಷ್ಟಪಟ್ಟು ಓದಿಸಿದ್ದಾರೆ. ಅವರಿಗೆ ಗೌರವ ತಂದುಕೊಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ಈಗ ಸಾಧ್ಯವಾಗಿದೆ’.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕ ಪಡೆದಿರುವ ನಗರದ ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆಯ ಮನದಾಳ ಇದು. ಬೃಂದಾ, ಕೋಟೆ ಬಡಾವಣೆಯ ಮಂಜುನಾಥ್ ತಾಪ್ಸೆ ಮತ್ತು ಹರ್ಷಿಣಿ ಡಿ. ಅವರ ಪುತ್ರಿ.

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಈಕೆ, ಟೈಲರಿಂಗ್ ವೃತ್ತಿಯಲ್ಲಿ ತಂದೆ– ತಾಯಿ ಇಬ್ಬರೂ ಹಗಲಿರುಳು ಶ್ರಮಪಡುವುದನ್ನು ಕಣ್ಣಾರೆ ಕಂಡಿದ್ದಳು.

‘ಮೊದಲಿನಿಂದಲೂ ಓದಿನಲ್ಲಿ ಮುಂದಿರುವ ಬೃಂದಾ, ಶೇ 98ರಷ್ಟು ಅಥವಾ ಶೇ 98.5ರಷ್ಟು ಅಂಕ ಪಡೆಯಬಹುದು ಎಂದು ನಿರೀಕ್ಷೆ ಮಾಡಿದ್ದೆವು. 625 ಅಂಕ ಪಡೆದಿರುವುದು ಖುಷಿ ತಂದಿದೆ’ ಎಂದು ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

‘ಸೇಂಟ್ ಮೇರಿಸ್ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಹಕಾರ ಚೆನ್ನಾಗಿತ್ತು. ತರಗತಿ ಮುಗಿದ ನಂತರ ಶಾಲೆಯಲ್ಲೇ ವಿಶೇಷ ಕೋಚಿಂಗ್ ಇರುತ್ತಿತ್ತು. ಶಾಲೆಯಿಂದ ಬಂದ ಕೂಡಲೇ ಸ್ವಲ್ಪ ಬಿಡುವು ನೀಡಿ ಊಟ ಮಾಡಿ ಮತ್ತೆ ಓದಲು ಕುಳಿತರೆ ರಾತ್ರಿ 12 ಗಂಟೆ ತನಕ ಓದುತ್ತಿದ್ದಳು. ಪರೀಕ್ಷೆ ಸಮಯದಲ್ಲಿ ಮತ್ತೆ ನಸುಕಿನಲ್ಲಿ 4 ಗಂಟೆಗೆ ಎದ್ದು ಓದಿದ ಉದಾಹರಣೆಗಳು ಇವೆ’ ಎಂದು ತಾಯಿ ಹರ್ಷಿಣಿ ಡಿ. ಅವರು ವಿವರಿಸಿದರು.

ಶಾಲೆಯ ಆಡಳಿತ ಮಂಡಳಿಯವರು ಸಿಹಿ ಹಂಚಿ ಸಂಭ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1480777144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.