ಚಿಕ್ಕಜಾಜೂರು: ಇಲ್ಲಿನ ಶಾರದಾ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದೆ. ಇದೇ ಶಾಲೆಯಲ್ಲಿ ಓದಿದ ಕೆ.ಆರ್. ದರ್ಶಿನಿ 621 ಅಂಕ ಗಳಿಸಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಪಡೆದಿದ್ದಾರೆ.

ಕೆ.ಆರ್. ದರ್ಶಿನಿ ಚಿಕ್ಕಜಾಜೂರು ಸಮೀಪದ ಕೇಶವಾಪುರ ಗ್ರಾಮದ ರೈತ ಟಿ. ರವಿಕುಮಾರ್ ಹಾಗೂ ಅನಿತಾ ದಂಪತಿ ಪುತ್ರಿಯಾಗಿದ್ದು, ಮಗಳು ಹೆಚ್ಚು ಅಂಕ ಗಳಿಸಿರುವುದು ಸಂತಸ ತಂದಿದೆ ಎಂದು ಪೋಷಕರು ಹೇಳಿದರು.

ಶಾಲೆಯಲ್ಲಿ ಒಟ್ಟು 57 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆ.ಆರ್. ದರ್ಶಿನಿ 621 ಅಂಕ ಗಳಿಸಿ ಜಿಲ್ಲೆಗೆ ಮೊದಲಿಗಳಾಗಿದ್ದಾಳೆ. ಬಿ. ಅಂಕಿತಾ (612) ದ್ವಿತೀಯ ಸ್ಥಾನ, ಸಿ. ಸೃಷ್ಟಿ 605, ಎಸ್. ಮಧುಶ್ರೀ ಹಾಗೂ ಪಿ.ಎಚ್. ಧನುಷ್ ಕ್ರಮವಾಗಿ 603 ಅಂಕ, ಪಿ. ಪಲ್ಲವಿ 602 ಹಾಗೂ ಎಸ್. ಹರ್ಷಿತಾ 601 ಅಂಕ ಗಳಿಸಿದ್ದಾರೆ.

ಕನ್ನಡದಲ್ಲಿ ಇಬ್ಬರು 125 ಅಂಕ ಗಳಿಸಿದರೆ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ, ಹಿಂದಿ ಭಾಷಾ ವಿಷಯದಲ್ಲಿ 15 ವಿದ್ಯಾರ್ಥಿಗಳು ಮತ್ತು ಸಮಾಜ ವಿಜ್ಞಾನದಲ್ಲಿ 6 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿರುವುದು ವಿಶೇಷವಾಗಿದೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಎನ್. ರಂಗನಾಥ್, ಆಡಳಿತಾಧಿಕಾರಿ ಬಿ.ಎನ್. ಯೋಗೀಶ್, ಮುಖ್ಯ ಶಿಕ್ಷಕ ಟಿ. ಸಂತೋಷ್ ಕುಮಾರ್ ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-44-681690981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.