ಚಿತ್ರದುರ್ಗ: ‘2025-2026ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಐತಿಹಾಸಿಕ ಸಾಧನೆ ಮಾಡಿದೆ. ಎಡ್ ಲ್ಯಾಬ್ನ ದತ್ತಾಂಶ ಆಧಾರಿತ ಕ್ರಮಗಳಿಂದಾಗಿ ಎಸ್ಎಸ್ಎಲ್ಸಿಯಲ್ಲಿ 3ನೇ ಹಾಗೂ ಪಿಯುಸಿಯಲ್ಲಿ 5ನೇ ಸ್ಥಾನ ಪಡೆದು ದಕ್ಷಿಣ ಕರ್ನಾಟಕದಲ್ಲಿಯೇ ಚಿತ್ರದುರ್ಗ ಅಗ್ರಸ್ಥಾನಕ್ಕೇರಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ ವಿದ್ಯಾರ್ಥಿಗಳ ಅನುತ್ತೀರ್ಣ ಮಟ್ಟಕ್ಕೆ ಕೇವಲ ಬೆರಳೆಣಿಕೆಯಷ್ಟು ನಿರ್ದಿಷ್ಟ ಶಾಲೆಗಳೇ ಕಾರಣ ಎಂದು ಎಡ್ ಲ್ಯಾಬ್ ಗುರುತಿಸಿದೆ. ಹಿಂದಿನ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 7,902 ವಿದ್ಯಾರ್ಥಿ ಗಳು ಅನುತ್ತೀರ್ಣರಾಗಿದ್ದು, ಇದರಲ್ಲಿ 6,531 (ಶೇ 82.64) ವಿದ್ಯಾರ್ಥಿಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೇರಿದವರಾಗಿದ್ದರು. ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿದಾಗ ಅನುತ್ತೀರ್ಣರಾದವರಲ್ಲಿ 4,025 ವಿದ್ಯಾರ್ಥಿಗಳು ಕೇವಲ 100 ಕಳಪೆ ಸಾಧನೆಯ ಶಾಲೆಗಳಿಂದಲೇ (ಜಿಲ್ಲೆಯ ಒಟ್ಟು ಶಾಲೆಗಳ ಶೇ 20ರಷ್ಟು ಮಾತ್ರ) ಬಂದಿದ್ದರು ಎಂಬುದು ಸ್ಪಷ್ಟವಾಗಿದೆ.

ಎಡ್ ಲ್ಯಾಬ್ ಈ 100 ಶಾಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ವರ್ಷಪೂರ್ತಿ ಕಟ್ಟುನಿಟ್ಟಿನ ನಿಗಾ ವಹಿಸಿತು. ಇದರ ಪರಿಣಾಮವಾಗಿ, ಈ ನಿರ್ದಿಷ್ಟ ಶಾಲೆಗಳ ಉತ್ತೀರ್ಣ ಪ್ರಮಾಣ ಶೇ 47.47ರಿಂದ ಶೇ 88.43ಕ್ಕೆ ಏರಿಕೆಯಾಗಿದೆ. ಈ ಸೂಕ್ಷ್ಮ ಮಟ್ಟದ ಗುರಿಯುಳ್ಳ ಕ್ರಮವು ಜಿಲ್ಲೆಯ ಶೈಕ್ಷಣಿಕ ಚಿತ್ರಣವನ್ನೇ ಬದಲಾಯಿಸಿದ್ದು, ಚಿತ್ರದುರ್ಗದ ಒಟ್ಟಾರೆ ಎಸ್ಎಸ್ಎಲ್ಸಿ ಉತ್ತೀರ್ಣತೆ ಪ್ರಮಾಣವನ್ನು ಶೇ 70.45 ರಿಂದ ಶೇ 92.25 ಕ್ಕೆ ಕೊಂಡೊಯ್ದಿದೆ. ಈ ಗಮನಾರ್ಹ ಸಾಧನೆಯೊಂದಿಗೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸುಧಾರಣೆ ಕಂಡ 3ನೇ ಜಿಲ್ಲೆಯಾಗಿ ಚಿತ್ರದುರ್ಗ ಹೊರಹೊಮ್ಮಿದೆ.

ಪದವಿಪೂರ್ವ ವಿಭಾಗದಲ್ಲೂ ಇದೇ ರೀತಿಯ ಅತ್ಯಂತ ಕರಾರುವಕ್ಕಾದ ವಿಧಾನವನ್ನು ಅಳವಡಿಸಲಾಗಿದ್ದು, ಇಲ್ಲೂ ಆಶ್ಚರ್ಯಕರ ಫಲಿತಾಂಶ ಲಭಿಸಿದೆ.

ಹಿಂದಿನ ವರ್ಷ ಅನುತ್ತೀರ್ಣರಾದ 5,383 ವಿದ್ಯಾರ್ಥಿಗಳ ಪೈಕಿ, 4,661 (ಶೇ 86.58) ವಿದ್ಯಾರ್ಥಿಗಳು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳವರಾಗಿದ್ದರು. ಇವರಲ್ಲಿ ಬರೋಬ್ಬರಿ 2,577 ವಿದ್ಯಾರ್ಥಿಗಳು ಕೇವಲ 10 ಕಳಪೆ ಸಾಧನೆಯ ಸರ್ಕಾರಿ–ಅನುದಾನಿತ ಪಿಯು ಕಾಲೇಜುಗಳಿಗೆ (ಜಿಲ್ಲೆಯ ಒಟ್ಟು ಕಾಲೇಜುಗಳ ಶೇ 12ರಷ್ಟು) ಸೇರಿದವರಾಗಿದ್ದರು.

ಈ 10 ಕಾಲೇಜುಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ ಪರಿಣಾಮ, ಈ ಗುರಿಯಿಟ್ಟ ಕಾಲೇಜುಗಳ ಉತ್ತೀರ್ಣತೆ ಪ್ರಮಾಣ ಶೇ 38.31 ರಿಂದ ಶೇ 66.12 ಕ್ಕೆ ಏರಿತು. ಈ ಬದಲಾವಣೆಯು ಜಿಲ್ಲೆಯ ಒಟ್ಟು ಪಿಯುಸಿ ಫಲಿತಾಂಶದಲ್ಲಿ ಬೃಹತ್ ಯಶಸ್ಸು ತಂದುಕೊಟ್ಟಿದ್ದು, ಜಿಲ್ಲೆಯ ಒಟ್ಟಾರೆ ಉತ್ತೀರ್ಣತೆ ಪ್ರಮಾಣ ಶೇ 59.87ರಿಂದ ಶೇ 79.12ಕ್ಕೆ ಜಿಗಿದಿದೆ. ಸುಮಾರು 20 ಅಂಕಗಳ ಈ ಏರಿಕೆಯಿಂದಾಗಿ, ಪಿಯುಸಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸುಧಾರಣೆ ಕಂಡ 5ನೇ ಜಿಲ್ಲೆಯಾಗಿ ಚಿತ್ರದುರ್ಗ ಸ್ಥಾನ ಪಡೆದಿದೆ.

ಇಂತಹ ಸಾಧನೆಗೆ ಕಾರಣರಾದ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆಗಳು ಎಂದು ಡಾ.ಎಸ್.ಆಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-44-261351915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.