ಉಳ್ಳಾಲ: ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೂ, ಅತ್ಯಧಿಕ ಫಲಿತಾಂಶ ಬಂದಿರುವುದು ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಶಾಲೆಗಳಾಗಿವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು

ಮಂಗಳೂರು ಯು.ಟಿ.ಫರೀದ್ ಫೌಂಡೇಶನ್, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ತೊಕ್ಕೊಟ್ಟು ಖಾಸಗಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದ ಶಾಲೆಗಳು ಹಾಗೂ ಅಧಿಕ ಅಂಕ ಪಡೆದ ಉಳ್ಳಾಲ ತಾಲ್ಲೂಕಿನ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 2,79,995 ವಿದ್ಯಾರ್ಥಿಗಳಲ್ಲಿ 2,469 ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಕ್ಕೆ ಒತ್ತು ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಫೇಲಾದವರ ಸಂಖ್ಯೆ 435ಕ್ಕೆ ಇಳಿದಿದೆ ಎಂದರು.

ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ ಆಗಬೇಕು. ಈ ಕಾರಣದಿಂದಲೇ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಬೇಕಾದ ಮೂಲ ಸೌಲಭ್ಯ ನೀಡಲಾಗುವುದು. ಆರಂಭಿಕ ಹಂತದಲ್ಲಿ ಪ್ರೌಢ ಶಾಲೆಗಳಿಗೆ ಪೂರ್ಣ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮಾತನಾಡಿದರು. ಪಿಎ ಕಾಲೇಜು ಪದವಿ ವಿಭಾಗದ ಪ್ರಾಂಶುಪಾಲ ಸರ್ಫರಾಝ್ ಹಾಸಿಂ ವಿವಿಧ ಕೋರ್ಸ್ಗಳ ಮಾಹಿತಿ ನೀಡಿದರು. ಶಿಕ್ಷಣ ಸಂಯೋಜಕ ವಿಶ್ವನಾಥ್ ಎಸ್ಸೆಸ್ಸೆಲ್ಸಿ ಫಲಿತಾಂಶದ ವರದಿ ಮಂಡಿಸಿದರು.

ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಣಚೂರು ಮೋನು, ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಸುರೇಶ್ ಭಟ್ನಗರ, ಜಿ.ಪಂ.ಮಾಜಿ ಸದಸ್ಯ ಎನ್.ಎಸ್.ಕರೀಮ್, ಮನ್ಸೂರ್ ಮಂಚಿಲ ,ಕೆಎಂಕೆ ಮಂಜನಾಡಿ, ಜಗದೀಶ್ ಶೆಟ್ಟಿ, ಬಂಟ್ವಾಳ ಬಿಇಒ ಮಾಲತಿ, ಸಾಜಿದ್ ಉಳ್ಳಾಲ, ರಫೀಕ್ ಅಂಬ್ಲಮೊಗರು, ಸಲಾಮ್ ಉಚ್ಚಿಲ, ಮುಸ್ತಫಾ ಮಲಾರ್,ಮೊಹಮ್ಮದ್ ರಫೀಕ್, ಲಿಲ್ಲಿ ಫಾಯಿಸ್, ಶಶಿಕಲ, ರಝಾಕ್ ಇರಾ, ಜಬ್ಬಾರ್ ಬೋಳಿಯಾರ್ ರಝಿಯಾ ಇಬ್ರಾಹೀಮ್, ಮುರಳೀಧರ ಶೆಟ್ಟಿ, ಪುರುಷೋತ್ತಮ ಪಿಲಾರ್, ದಿನೇಶ್ ರೈ, ಯೂಸುಫ್ ಬಾವ ದೇರಳಕಟ್ಟೆ, ದೇವಕಿ ಉಳ್ಳಾಲ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಸ್ವಾಗತಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-214107541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.