ಗದಗ: ‘ಭಾಷಾ ತಜ್ಞರು, ಶಿಕ್ಷಣ ತಜ್ಞರು ಹಲವು ವರ್ಷಗಳಿಂದ ದ್ವಿಭಾಷಾ ನೀತಿಗಾಗಿ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಜನರ ಬೇಡಿಕೆಗೆ ಮನ್ನಣೆ ನೀಡಿರುವ ಸರ್ಕಾರ ಗ್ರೇಡಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಆದರೆ, ಈ ಸಂಪೂರ್ಣ ಪ್ರಕ್ರಿಯೆಯನ್ನು ಯಾವುದೇ ರೀತಿಯ ಸಮಾಲೋಚನೆ ನಡೆಸದೆ ಪರೀಕ್ಷೆಯ ಮಧ್ಯ ಭಾಗದಲ್ಲಿ ಘೋಷಿಸಿರುವುದು ಖಂಡನೀಯ’ ಎಂದು ಎಐಡಿಎಸ್ಒ ಜಿಲ್ಲಾ ಸಂಚಾಲಕಿ ಎಂ.ಶಾಂತಿ ಹೇಳಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯನ್ನು ಕಡ್ಡಾಯ ತೇರ್ಗಡೆಯಿಂದ ಹೊರಗಿರಿಸಿ, ಎಸ್ಎಸ್ಎಲ್ಸಿಯ ಒಟ್ಟಾರೆ ಅಂಕವನ್ನು 525ಕ್ಕೆ ಇಳಿಸಿದೆ. ಹಿಂದಿ ಭಾಷೆಯನ್ನು ಗುರಿಯಾಗಿರಿಸಿ ತೃತೀಯ ಭಾಷೆಯ ಹೊರೆ ಕಡಿಮೆಗೊಳಿಸಿರುವುದು ಮುಂದೆ ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೀಗ, ವಿದ್ಯಾರ್ಥಿಗಳ ಹಿತದೃಷ್ಟಿಯ ಹೆಸರಿನಲ್ಲಿ ಇಂತಹ ನೀತಿಯನ್ನು ಜಾರಿಗೆ ತಂದರೆ, ಮುಂದೆ ಇದೇ ರೀತಿಯಲ್ಲಿ ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಸಹ ಯಾವುದೇ ಸಮಾಲೋಚನೆ, ಚರ್ಚೆ ಇಲ್ಲದೆ ಜಾರಿಗೆ ತರುವುದು ಸರ್ವೇ ಸಾಮಾನ್ಯ ಎಂಬಂತಾಗುತ್ತದೆ. ಈ ರೀತಿ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು, ಪೋಷಕರು ಯಾರ ಅಭಿಪ್ರಾಯವನ್ನು ಪಡೆಯದೇ ನೀತಿಗಳನ್ನು ಬದಲಾಯಿಸುವ ಪ್ರಕ್ರಿಯೆ ಶಿಕ್ಷಣದ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಖಂಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-23-675610460

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.