ಗದಗ: ‘ವಿದ್ಯಾರ್ಥಿಗಳ ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಪರಿಶ್ರಮದ ಗುಣಾತ್ಮಕ ಕಲಿಸುವಿಕೆಯಿಂದಾಗಿ ಈ ಸಲ ಎಸ್.ಎಸ್.ಎಲ್.ಸಿ ಫಲಿತಾಂಶವು ಉತ್ತಮವಾಗಿದೆ’ ಎಂದು ಡಿಡಿಪಿಐ ಆರ್.ಎಸ್.ಬುರಡಿ ಹೇಳಿದರು.

ಬೆಟಗೇರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಗದಗ ಐಎಂಎ ಶತಮಾನೋತ್ಸವದ ಅಂಗವಾಗಿ ಶನಿವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಖಗೋಳ ವಿಸ್ಮಯ ಉಚಿತ ಬೇಸಿಗೆ ಶಿಬಿರ 10ನೇ ದಿನದ 45ನೇ ಶೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ಅಧಿಕಾರಿಗಳ ನಿರಂತರ ಭೇಟಿ ಹಾಗೂ ಮಾರ್ಗದರ್ಶನ, ವಿಶೇಷ ಕಾರ್ಯಾಗಾರ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ಮಾರ್ಗದರ್ಶನ, ಸಂಪನ್ಮೂಲ ಶಿಕ್ಷಕರಿಂದ ಸಂದೇಹ ನಿವಾರಣೆ, ವಿವಿಧ ತಾಲ್ಲೂಕುಗಳಲ್ಲಿ ವಸತಿಯುತ ತರಬೇತಿಗಳು, ಪ್ರೇರಣಾ ಕಾರ್ಯಗಾರಗಳು, ನಿಧಾನ ಕಲಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರಗಳ ಫಲಶ್ರುತಿಯೇ ಈ ಉತ್ತಮ ಫಲಿತಾಂಶವಾಗಿದೆ ಎಂದರು.

ನಿವೃತ್ತ ಡಿಡಿಪಿಐ ಎ.ಎನ್.ನಾಗರಳ್ಳಿ ಮಾತನಾಡಿ, ‘ಸರ್ಕಾರಿ ಶಾಲೆಯ ಉನ್ನತೀಕರಣ – ನಮ್ಮ ಸಮೂಹದ ಜವಾಬ್ದಾರಿ, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗುವುದು ಅಗತ್ಯ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಮುದಾಯ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ತಿಳಿಸಿದರು.

ನಿವೃತ್ತ ಡಿಡಿಪಿಐ ಐ.ಬಿ.ಬೆನಕೊಪ್ಪ ಮಾತನಾಡಿದರು. ಗದಗ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವು ಉತ್ತಮಗೊಳ್ಳಲು ಕಾರಣರಾದ ಡಿಡಿಪಿಐ ಆರ್.ಎಸ್.ಬುರಡಿ ಅವರನ್ನು ಸನ್ಮಾನಿಸಲಾಯಿತು.

ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಚ್.ಸವದತ್ತಿ, ಎಂ.ಎ.ಯರಗುಡಿ, ಶಾಮ ಲಾಂಡೆ, ವಿಜಯ ಕುಮಾರ ಕಪ್ಲಿ, ಬಸವರಾಜ ಕಡಿವಾಲ, ಸಾಗರ ಅಂಗಡಿ, ಸದಾನಂದ ವಿದ್ಯಾರ್ಥಿಗಳು ಶಿಕ್ಷಕರು ಪಾಲಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-23-1872357179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.