ಗಂಗಾವತಿ: ಕನಕಗಿರಿ ತಾಲ್ಲೂಕಿನ ಕೆಪಿಎಸ್ಸಿ ಶಾಲೆಯ ವಿದ್ಯಾರ್ಥಿ ಶರಣಬಸಪ್ಪ ಹುಲುಗಪ್ಪ ಅವರನ್ನು 2026ರ ಎಸ್ಎಸ್ಎಲ್ಸಿ ಪರೀಕ್ಷೆ-2ಕ್ಕೆ ಹೆಸರು ನೋಂದಣಿ ಮಾಡದ ಶಾಲೆ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಎಸ್ಎಫ್ಐ ಸದಸ್ಯರು ಮಂಗಳವಾರ ಬಿಇಒ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ‘2024-25ನೇ ಸಾಲಿನಲ್ಲಿ ಶರಣಬಸವ ಹುಲಗಪ್ಪ ಎಂಬ ವಿದ್ಯಾರ್ಥಿ ಕನಕಗಿರಿಯ ಕೆಪಿಎಸ್ಸಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡಿ, ಅಂತಿಮ ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ. ಅದೇ ಸಾಲಿನಲ್ಲಿ ಅವಕಾಶವಿದ್ದ 3 ಅವಕಾಶಗಳಲ್ಲಿ 1 ಅವಕಾಶ ಬಳಸಿ, ಉಳಿದ 2 ಅವಕಾಶಗಳ ಪರೀಕ್ಷೆ ಎದುರಿಸದೆ ಅನುತ್ತೀರ್ಣನಾಗಿದ್ದಾನೆ.

‘2025-26ನೇ ಸಾಲಿನಲ್ಲಿ ಪರೀಕ್ಷೆ-2ಗೆ ಹೆಸರು ನೋಂದಣಿಗಾಗಿ ಏಪ್ರಿಲ್ 26, 2026ರಂದು ಶರಣಬಸವ ಶಾಲೆಗೆ ತೆರಳಿ, ನೋಂದಣಿ ಸಂಖ್ಯೆ, ಫೋಟೊ, ಸಹಿ, ಅನುತ್ತೀರ್ಣ ವಿಷಯಗಳ ಪರೀಕ್ಷಾ ಶುಲ್ಕ ನೀಡಿದ್ದಾನೆ. ಆದರೆ ಶಾಲೆ ಮುಖ್ಯಶಿಕ್ಷಕ, ಸಿಬ್ಬಂದಿ ಪರೀಕ್ಷೆಗೆ ದಾಖಲೆಗಳನ್ನು ನೀಡದೆ, ಹೆಸರು ನೋಂದಣಿ ಮಾಡಿಸದೆ, ಅನ್ಯಾಯವೆಸಗಿದ್ದು, ವಿದ್ಯಾರ್ಥಿ ಜೀವನದೊಂದಿಗೆ ಚೆಲ್ಲಾಟವಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಮಾತನಾಡಿ, ‘ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯನದಿಂದ ವಿದ್ಯಾರ್ಥಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ತನ್ನದಲ್ಲದ ತಪ್ಪಿಗೆ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ. ಪರೀಕ್ಷೆ ಬರೆಯಲು ಅವಕಾಶವಿದ್ದು, ಅದರಲ್ಲಿ ಮತ್ತೆ ಅನುತ್ತೀರ್ಣರಾದರೆ, ವಿದ್ಯಾರ್ಥಿ 6 ವಿಷಯಗಳನ್ನು ಬಾಹ್ಯವಾಗಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಪರೀಕ್ಷೆ ಬರೆಯಬೇಕಾಗುತ್ತದೆ. ನಿತ್ಯ ಶಾಲೆಗೆ ಹೋಗಿಯೇ ಪರೀಕ್ಷೆಯಲ್ಲಿ ಉತ್ತೀರ್ಣನಾಗದ ವಿದ್ಯಾರ್ಥಿ, ಬಾಹ್ಯವಾಗಿ ಪರೀಕ್ಷೆ ಬರೆದು ಪಾಸಾಗುವುದು ಹೇಗಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಪರೀಕ್ಷೆ ತಪ್ಪಲು ಕಾರಣರಾದ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಶರಣಬಸವ, ಕಾರ್ತಿಕ, ದುರ್ಗೇಶ ಬಸವರಾಜ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-354839591

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.