ಹಾಸನ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆಯಾಗಿದ್ದು, ಆರನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕಳೆದ ಬಾರಿ ಶೇ 82.12 ರಷ್ಟು ದಾಖಲಾಗಿದ್ದ ಫಲಿತಾಂಶ, ಈ ಬಾರಿ ಶೇ 97.51ಕ್ಕೆ ಏರಿದೆ.

ಪರೀಕ್ಷೆಗೆ ಹಾಜರಾಗಿದ್ದ 19,041 ವಿದ್ಯಾರ್ಥಿಗಳ ಪೈಕಿ 18,566 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 475 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಸಕಲೇಶಪುರ ತಾಲ್ಲೂಕು ಗರಿಷ್ಠ ಶೇ 99.17 ಫಲಿತಾಂಶ ಪಡೆದಿದ್ದು, ಬೇಲೂರು ತಾಲ್ಲೂಕು ಶೇ 95.59 ಫಲಿತಾಂಶ ಪಡೆಯುವ ಮೂಲಕ ಕೊನೆಯ ಸ್ಥಾನದಲ್ಲಿದೆ.

ಪರೀಕ್ಷೆಗೆ ಹಾಜರಾಗಿದ್ದ 9,424 ಬಾಲಕರ ಪೈಕಿ 9,086 ಮಂದಿ ತೇರ್ಗಡೆಯಾಗಿದ್ದು, ಶೇ 96.41 ಫಲಿತಾಂಶ ಪಡೆದಿದ್ದಾರೆ. 9,618 ಬಾಲಕಿಯರ ಪೈಕಿ 9,481 ಜನರು ಉತ್ತೀರ್ಣರಾಗಿದ್ದು, ಶೇ 98.58 ಫಲಿತಾಂಶ ದಾಖಲಾಗಿದೆ.

ಇನ್ನು ನಗರ ಪ್ರದೇಶದ 6,712 ಜನರಲ್ಲಿ 6,488 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 96.66 ಹಾಗೂ ಗ್ರಾಮೀಣ ಭಾಗದ 12,330 ವಿದ್ಯಾರ್ಥಿಗಳ ಪೈಕಿ 12,078 ಮಂದಿ ತೇರ್ಗಡೆಯಾಗುವ ಮೂಲಕ ಶೇ 97.96 ಫಲಿತಾಂಶ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 475 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಅರಕಲಗೂಡು ತಾಲ್ಲೂಕಿನ 32, ಆಲೂರು ತಾಲ್ಲೂಕಿನ 15, ಅರಸೀಕೆರೆಯ 90, ಬೇಲೂರಿನ 33, ಚನ್ನರಾಯಪಟ್ಟಣದ 69, ಹಾಸನದ 149, ಹೊಳೆನರಸೀಪುರದ 35 ಹಾಗೂ ಸಕಲೇಶಪುರದ 49 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಇನ್ನೊಂದೆಡೆ 146 ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಆಲೂರು ತಾಲ್ಲೂಕಿನ 12, ಅರಸೀಕೆರೆ ತಾಲ್ಲೂಕಿನ 27, ಅರಕಲಗೂಡು ತಾಲ್ಲೂಕಿನ 18, ಬೇಲೂರು ತಾಲ್ಲೂಕಿನ 11, ಚನ್ನರಾಯಪಟ್ಟಣ ತಾಲ್ಲೂಕಿನ 25, ಹಾಸನ ತಾಲ್ಲೂಕಿನ 20, ಹೊಳೆನರಸೀಪುರ ತಾಲ್ಲೂಕಿನ 21, ಸಕಲೇಶಪುರ ತಾಲ್ಲೂಕಿನ 17 ಶಾಲೆಗಳು ಈ ಸಾಧನೆ ಮಾಡಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-36-1642229834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.