ಹಾವೇರಿ: ರಾಜ್ಯದಾದ್ಯಂತ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವು ಇತ್ತೀಚೆಗೆ ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಸಹ ಉತ್ತಮ ಅಂಕ ಪಡೆದುಕೊಂಡಿದ್ದಾರೆ.

‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯೊಂದಿಗೆ ಬರುವ ‘ದಿಕ್ಸೂಚಿ’ ವಿಶೇಷ ಸಂಚಿಕೆಯನ್ನು ಓದುತ್ತಿದ್ದ ಹಲವು ವಿದ್ಯಾರ್ಥಿಗಳು, ಉತ್ತಮ ಸಾಧನೆ ಮಾಡಿದ್ದಾರೆ. ತಮ್ಮ ಓದಿನ ಯಶಸ್ಸಿಗೆ ಕಾರಣವಾದ ‘ದಿಕ್ಸೂಚಿ’ಯನ್ನು ಹೊಗಳುತ್ತಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿ, ಜ್ಞಾನ ಹೆಚ್ಚಿಸುವ ವಿಷಯಗಳನ್ನು ಒಳಗೊಂಡು ದಿಕ್ಸೂಚಿಯನ್ನು ಹೊರತರಲಾಗುತ್ತಿದೆ. ಪೂರಕ ಪರೀಕ್ಷೆಗಳಲ್ಲಿ ಸಾಮಾನ್ಯ ದರ್ಜೆಯ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಗಳು, ದಿಕ್ಸೂಚಿ ಓದಿನ ನಂತರ ಉತ್ತಮ ಅಂಕ ಪಡೆದು ಇಂದು ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಹಾವೇರಿ ತಾಲ್ಲೂಕಿನ ಅಕ್ಕೂರ ಗ್ರಾಮದ ಗಂಗಮ್ಮ ಕಾಡಪ್ಪ ಮರೋಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಹಲವು ವರ್ಷಗಳಿಂದ ದಿಕ್ಸೂಚಿ ಓದುತ್ತಿದ್ದಾರೆ. ನಿರಂತರ ಓದಿನಿಂದಾಗಿ ಈ ಶಾಲೆಯು ಈ ವರ್ಷದ ಫಲಿತಾಂಶದಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ.

‘ಶೈಕ್ಷಣಿಕ ಕ್ಷೇತ್ರದಲ್ಲಿ ಸಮಗ್ರ ಜ್ಞಾನ ನೀಡುವ ಏಕೈಕ ಪತ್ರಿಕೆ ಪ್ರಜಾವಾಣಿ. ಇದರಡಿ ಹೊರತರುವ ದಿಕ್ಸೂಚಿಯೂ ನಮ್ಮ ಮಕ್ಕಳ ಓದಿಗೆ ಹೆಚ್ಚು ನೆರವಾಗಿದೆ. ಇದರಿಂದಲೇ ಈ ಬಾರಿ ಶೇ 100ರಷ್ಟು ಫಲಿತಾಂಶ ಬಂದಿದೆ’ ಎಂದು ಪ್ರೌಢಶಾಲೆಯ ಮುಖ್ಯಶಿಕ್ಷಕ ಪಂಚಾಕ್ಷರಿ ಮುರಮಟ್ಟಿ ಅವರು ಸಂತಸ ಹಂಚಿಕೊಂಡರು.

‘ಹೊಸರಿತ್ತಿ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ‘ಪ್ರಜಾವಾಣಿ’ಯಿಂದ ಶಾಲೆಗೆ ದಿಕ್ಸೂಚಿ ಸಂಚಿಕೆ ಬರುತ್ತಿತ್ತು. ಪ್ರಭಾರಿ ಮುಖ್ಯಶಿಕ್ಷಕರಾಗಿದ್ದ ವೀಣಾ ದೀಕ್ಷಿತ್ ಅವರು, ಮಕ್ಕಳಲ್ಲಿ ದಿಕ್ಸೂಚಿ ಓದುವ ಹವ್ಯಾಸ ಬೆಳೆಸಿದ್ದರು. ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ದಿಕ್ಸೂಚಿ ಓದುತ್ತಿದ್ದರು. ಶಾಲೆಯ ಶಿಕ್ಷಕರು ಉತ್ತಮವಾಗಿ ಪಾಠ ಬೋಧಿಸಿದರು. ಮಕ್ಕಳು ಪಾಠ, ಪ್ರವಚನಗಳನ್ನು ಚೆನ್ನಾಗಿ ಆಲಿಸಿದರು. ಜೊತೆಗೆ ನಿತ್ಯವೂ ಶಾಲೆಗೆ ಬರುತ್ತಿದ್ದ ‘ಪ್ರಜಾವಾಣಿ’ ದಿಕ್ಸೂಚಿ ಕೂಡ ವಿದ್ಯಾರ್ಥಿಗಳಿಗೆ ನೆರವಾಗಿದೆ. ಪತ್ರಿಕೆಯಲ್ಲಿ ಎಸ್ಎಸ್ಎಲ್ಸಿಯ ಎಲ್ಲ ವಿಷಯಗಳ ಪ್ರಶ್ನೋತ್ತರಗಳು, ಸರಳ ಪರಿಹಾರ, ಓದುವ ರೀತಿ, ಪರೀಕ್ಷಾ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತ ಮಾಹಿತಿ ಇತ್ತು. ಇದರಿಂದ ಮಕ್ಕಳ ಓದು ಸುಲಭವಾಯಿತು’ ಎಂದರು.

‘ದಿಕ್ಸೂಚಿ ಓದಿನಿಂದಲೇ ಈ ಬಾರಿ ನಮ್ಮ ಶಾಲೆಯು ಶೇ 100ರಷ್ಟು ಫಲಿತಾಂಶ ದಾಖಲಿಸಿದೆ. ಇದು ಹೆಮ್ಮೆಯ ಸಂಗತಿ’ ಎಂದು ಪಂಚಾಕ್ಷರಯ್ಯ ಹೇಳಿದರು.

‘ಶಾಲೆಯಲ್ಲಿ ಸಮಯ ಸಿಕ್ಕಾಗಲೆಲ್ಲಾ ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಕೊಟ್ಟು ಓದಲು ಹೇಳುತ್ತಿದ್ದೆವು. ದಿನಕಳೆದಂತೆ ಅವರಲ್ಲೂ ಅಭಿರುಚಿ ಬೆಳೆಯಿತು. ಸ್ವತಃ ಅವರೇ ಪ್ರಶ್ನೆ ಪತ್ರಿಕೆಗಳನ್ನೆಲ್ಲ ಬಿಡಿಸಿದರು. ಶಾಲೆಯ ಅಷ್ಟೂ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ವಿದ್ಯಾಶ್ರೀ ಕೋಟ್ರೇಶ ಅಗಡಿ ಶೇ 91.20ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಸಿಂಧೂ ಹನುಮಂತಪ್ಪ ಹೊಸಮನಿ (ಶೇ 82.24) ದ್ವಿತೀಯ ಸ್ಥಾನ, ಗೋಣೆಪ್ಪ ಮಾಲತೇಶ ಕಿತ್ತೂರ (ಶೇ 81.60) ಹಾಗೂ ಶಫಿಕಾ ಅನ್ವರಸಾಬ್ ಗಂದಿಗೇರ (ಶೇ 81.60) ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ಅಕ್ಕೂರ ಗ್ರಾಮದ ಗಂಗಮ್ಮ ಕಾಡಪ್ಪ ಮರೋಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-22-1035157446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.