ಹಿರಿಯೂರು: ಕೂಲಿ ಕೆಲಸ ಮಾಡುವ ದಂಪತಿಯ ಪುತ್ರನೊಬ್ಬ ಜಪಾನ್ನಲ್ಲಿ ನಡೆಯಲಿರುವ ಸಕುರ–ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಮತ್ತು ತಂತ್ರಜ್ಞಾನ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ.

ನಗರದ ಲಕ್ಕವ್ವನಹಳ್ಳಿ ರಸ್ತೆಯ ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಎನ್.ಕಾರ್ತಿಕ್ ಆಯ್ಕೆಯಾದ ವಿದ್ಯಾರ್ಥಿ. ಈತ ವಾಣಿವಿಲಾಸಪುರ ರಸ್ತೆಯ ಉಪ್ಪಾರಹಟ್ಟಿಯ ನಾಗರಾಜ– ಸುಧಾ ದಂಪತಿಯ ಪುತ್ರ.

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ನಡೆಸಲಾಗುವ ಇನ್ಸ್ಪೈರ್ ಅವಾರ್ಡ್ ಮಾನಕ್ನಲ್ಲಿ ‘ಪೆಡಲ್ ಆಪರೇಟೆಡ್ ಕಾಂಪೋಸ್ಟ್ ಶ್ರೆಡರ್’ ಎನ್ನುವ ಮಾದರಿ ತಯಾರಿಸಿ ಆನ್ಲೈನ್ ಮೂಲಕ ಪ್ರದರ್ಶಿಸಿದ್ದ. ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದ.

2024–25 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದ. ಈತನನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವೇ ಜಪಾನ್ಗೆ ಕಳುಹಿಸುತ್ತಿದ್ದು, ಸಂಪೂರ್ಣ ವೆಚ್ಚವನ್ನೂ ಭರಿಸುತ್ತಿದೆ.

ವಾಗ್ದೇವಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಅವರು ಕಾರ್ತಿಕ್ನನ್ನು ಸನ್ಮಾನಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ವಿ. ಅಮರೇಶ್, ಮಾರ್ಗದರ್ಶಿ ಶಿಕ್ಷಕಿ ರುಕ್ಮಿಣಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್, ಡಯಟ್ ಉಪನ್ಯಾಸಕ ರೇವಣ್ಣ, ನೋಡಲ್ ಅಧಿಕಾರಿ ನಿಜಗುಣಮೂರ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-44-893710401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.