ಹಿರಿಯೂರು: ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಅವಾಂತರದಿಂದಾಗಿ ಇಲ್ಲಿನ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿನಿಗೆ ವಿಜ್ಞಾನ ವಿಷಯದಲ್ಲಿ ಕೇವಲ 45 ಅಂಕಗಳು ಸಿಕ್ಕಿದ್ದು, ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿದಾಗ ಆಕೆ ಒಟ್ಟು 71 ಅಂಕ ಪಡೆದಿರುವುದು ಗೊತ್ತಾಗಿದೆ.

ಹಿರಿಯೂರು ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಎ.ಎಂ.ಅಮೃತೇಶ್ವರಸ್ವಾಮಿ ಅವರ ಪುತ್ರಿ ಎ.ಎಂ.ಅನನ್ಯಾ 625 ಕ್ಕೆ 536 ಅಂಕ ಗಳಿಸಿದ್ದಳು. ವಿಜ್ಞಾನದಲ್ಲಿ 45 ಅಂಕ ಬಂದಿದ್ದನ್ನು ಕಂಡು ಅನುಮಾನಗೊಂಡ ಆಕೆ ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿದ್ದಾಳೆ. ಆಗ ಭಾಗ–1 ರಲ್ಲಿ 24, ಭಾಗ–2 ರಲ್ಲಿ 22 ಹಾಗೂ ಭಾಗ–3 ರಲ್ಲಿ 25 ಸೇರಿ ಒಟ್ಟು 71 ಅಂಕ ಗಳಿಸಿರುವುದು ಗೊತ್ತಾಗಿದೆ. ಈಗ ಮತ್ತೆ 16 ಅಂಕ ಸೇರ್ಪಡೆಯಾಗಿರುವುದರಿಂದ ಆಕೆಯ ಒಟ್ಟು ಅಂಕ 552 ಕ್ಕೆ ಹೆಚ್ಚಿದೆ.

‘ಪರೀಕ್ಷಾ ಮಂಡಳಿಯ ಇಂತಹ ಯಡವಟ್ಟುಗಳಿಂದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತ್ವರಿತವಾಗಿ ಫಲಿತಾಂಶ ನೀಡುವ ಭರದಲ್ಲಿ ಇಂತಹ ಪ್ರಮಾದಗಳು ನಡೆಯುತ್ತವೆ. ಮಂಡಳಿಯು ಇನ್ನು ಮುಂದಾದರೂ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು’ ಎಂದು ಅನನ್ಯಾ ತಾಯಿ ಗಂಗಾ ಅಮೃತೇಶ್ವರಸ್ವಾಮಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-44-104320057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.