ಹೊಸದುರ್ಗ: ಪಟ್ಟಣದ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಎಂ.ಪಿ. ಪ್ರಕಾಶ್ ಪ್ರೌಢಶಾಲೆಯ ವಿದ್ಯಾರ್ಥಿ ಸೃಜನ್ ಎಸ್.ವಿ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 619 ಅಂಕಗಳಿಸಿ, ಶಾಲೆಗೆ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಶಾಲೆಯು ಈ ಬಾರಿ ಶೇ 99.37ರಷ್ಟು ಫಲಿತಾಂಶ ಪಡೆದಿದೆ. ಒಟ್ಟು 160 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 61 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 76 ವಿದ್ಯಾರ್ಥಿಗಳು ಪ್ರಥಮ ಹಾಗೂ 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 7 ವಿದ್ಯಾರ್ಥಿಗಳು, ಹಿಂದಿಯಲ್ಲಿ 14, ಸಮಾಜ ವಿಜ್ಞಾನದಲ್ಲಿ 3 ಹಾಗೂ ಗಣಿತದಲ್ಲಿ ಒಬ್ಬರು ಶೇ 100ರಷ್ಟು ಅಂಕಗಳಿಸಿದ್ದಾರೆ.

ಕೆ.ವಿ. ಹರ್ಷ 615, ಶಶಾಂಕ್ ಸಿ.ಬಿ. 615 ಅಂಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಚಿಂತನಾ ಎಂ.ಆರ್. 613 ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಸ್ಫೂರ್ತಿ ಎಸ್.ಎನ್. 608, ಬಿ.ಸಿ. ಪವನ್ ನಾಯ್ಡು 607, ಯಶಸ್ ಚಂದ್ರ ವೈ.ಯು. 604, ಸಾನಿಕ ವಿ. 603, ಶ್ರೀನಿವಾಸ್ ಆರ್ 603, ಸೃಷ್ಟಿ ಜಿ. 601, ಲಿಂಗಮೂರ್ತಿ ಎಸ್. 601, ಸ್ನೇಹಾ ಎ. 600, ಭೂಮಿಕಾ ಎಂ ದೇವಾಂಗ 595 ಅಂಕಗಳಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಉತ್ತಮ ಫಲಿತಾಂಶ ಬಂದಿದೆ.

ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್, ಅಕಾಡೆಮಿಕ್ ನಿರ್ದೇಶಕ ಎಂ.ಬಿ. ತಿಪ್ಪೇಸ್ವಾಮಿ ಸೇರಿ ಶಾಲೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-44-1904225116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.