ಹೊಸನಗರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊಸನಗರ ತಾಲ್ಲೂಕು ಶೇ 98.90 ರಷ್ಟು ಫಲಿತಾಂಶ ಗಳಿಸಿ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕಳೆದ ಸಾಲಿಗಿಂತ ಶೇ 4.85 ರಷ್ಟು ಏರಿಕೆ ಆಗಿದೆ.

ತಾಲ್ಲೂಕಿನ ಒಟ್ಟು 40 ಪ್ರೌಢಶಾಲೆಗಳಲ್ಲಿ 29 ಪ್ರೌಢಶಾಲೆಗಳು ನೂರಕ್ಕೆ ನೂರು ಫಲಿತಾಂಶ ಗಳಿಸಿ ಅತ್ಯುತ್ತಮ ಸಾಧನೆ ತೋರಿವೆ.

ನೂರಕ್ಕೆ ನೂರು: ಜಯನಗರ, ಬೆಳ್ಳೂರು, ಹೊಸನಗರ, ಸೊನಲೆ, ಕಾರಣಗಿರಿ, ನಗರ, ಹೆದ್ದಾರಿಪುರ, ಕಾನುಗೋಡು, ಮಸಗಲ್ಲಿ, ಕೋಡೂರು, ನಿಟ್ಟೂರು, ಸಂಪೆಕಟ್ಟೆ, ಚಿಕ್ಕಜೇನಿ ಹಾಗೂ ಹೊಸನಗರದ ಸರ್ಕಾರಿ ಪದವಿಪೂರ್ವ ಕಾಲೇಜು ವಿಭಾಗದ ಪ್ರೌಢಶಾಲೆಗಳು ‘ಶತಕ’ದ ಸಾಧನೆ ಮಾಡಿವೆ.

ಅನುದಾನಿತ ಪ್ರೌಢಶಾಲೆಗಳ ಪೈಕಿ ನಗರ ಪ್ರೌಢಶಾಲೆ ನಗರ, ಮಲೆನಾಡು ಪ್ರೌಢಶಾಲೆ ಹೊಸನಗರ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಗೇರುಪುರ, ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಹುಂಚ.

ಅನುದಾನ ರಹಿತ ಶಾಲೆಗಳಲ್ಲಿ ಹೋಲಿ ರೆಡಿಮರ್ ಹೊಸನಗರ, ಕುವೆಂಪು ವಿದ್ಯಾಶಾಲೆ ಹೊಸನಗರ, ಗುರೂಜಿ ಪ್ರೌಢಶಾಲೆ ಹೊಸನಗರ, ಶ್ರೀ ರಾಮಕೃಷ್ಣ ವಿದ್ಯಾಲಯ ಹೊಸನಗರ, ಕೆಪಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಾಸ್ತಿಕಟ್ಟೆ, ಶ್ರೀರಾಮಕೃಷ್ಣ ವಿದ್ಯಾ ಶಾಲೆ ಬಟ್ಟೆಮಲ್ಲಪ್ಪ, ಪ್ರಜ್ಞಾ ಭಾರತಿ ವಿದ್ಯಾಸಂಸ್ಥೆ ನಿಟ್ಟೂರು, ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಿಪ್ಪನ್ಪೇಟೆ, ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ರಿಪ್ಪನ್ಪೇಟೆ, ಅಮೃತ ವಿದ್ಯಾಲಯ ನಗರ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿವೆ.

ಬಟ್ಟೆಮಲ್ಲಪ್ಪದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಎ.ಜೀವನ 618 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೊಸನಗರದ ವಿದ್ಯಾರ್ಥಿನಿ ಶ್ರೇಯ ಎಂ.ಎಸ್. 613 ಹಾಗೂ ಮಾನ್ಯ ಆರ್. 612 ಅಂಕ ಗಳಿಸಿದ್ದು ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-42-22848427

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.