ಹೊಸಪೇಟೆ (ವಿಜಯನಗರ): ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊಸಪೇಟೆ ತಾಲ್ಲೂಕಿಗೆ ಎರಡನೇ ಟಾಪರ್ ಆಗಿರುವ ಯಶೋದಮ್ಮ ಮಂಗ ಳೂರು (ಶೇ 98.56) ಅವರು ಬಡತನದ ಬೇಗೆಯಲ್ಲೇ ಬೆಂದ ವರು. ನಾಲ್ಕು ತಿಂಗಳ ಹಿಂದೆಯಷ್ಟೇ ತನ್ನ ತಂದೆಯನ್ನು ಮೂಳೆ ಕ್ಯಾನ್ಸರ್ ಬಲಿ ಪಡೆದಿದ್ದರೂ ತಪಸ್ಸಿನಂತೆ ಓದಿ ಗೆಲುವು ಸಾಧಿಸಿದಾಕೆಗೆ ನೆರವಿನ ಅಗತ್ಯ ಈಗ ಹೆಚ್ಚಾಗಿದೆ.

ಕಾಳಘಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿರುವ ಯಶೋದಮ್ಮ ಅವರ ಅಪ್ಪ ಹುಚ್ಚಪ್ಪ ಮಂಗಳೂರು ಅವರು ಮಲಪನಗುಡಿಯಲ್ಲಿ ಟೈಲರಿಂಗ್ ನಡೆಸುತ್ತಿದ್ದರು. ಮೂವರು ಮಕ್ಕಳನ್ನು ಓದಿಸುವ, ಬೆಳೆಸುವ ಹೊಣೆಗಾರಿಕೆ ಅವರ ಮೇಲಿತ್ತು. ಆದರೆ ಕೊನೆಯ ಹಂತದಲ್ಲಿ ಪತ್ತೆಯಾದ ಮೂಳೆ ಕ್ಯಾನ್ಸರ್ ಕುಟುಂಬದ ಆಧಾರವನ್ನೇ ಅಲುಗಾಡಿಸಿಬಿಟ್ಟಿತು. ಬೋನ್ಮ್ಯಾರೊ ಚಿಕಿತ್ಸೆಗೆ ₹30 ಲಕ್ಷ ಹೊಂದಿಸಲು ಸಾಧ್ಯವಾಗದೆ ಕೇವಲ ಒಂದು ತಿಂಗಳಲ್ಲಿ ಅಂದರೆ ಕಳೆದ ಡಿಸೆಂಬರ್ನಲ್ಲಿ ಅವರು ಮೃತಪಟ್ಟರು.

ತಾಯಿ ನೀಲಮ್ಮ ಅವರು ಹೊಸಪೇಟೆಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಬರುವ ₹6 ಸಾವಿರ ಸಂಬಳದಲ್ಲೇ ಪಿಯುಸಿ ಮುಗಿಸಿರುವ ದೊಡ್ಡ ಮಗಳಿಗೆ ಮದುವೆ ಮಾಡಿಸಬೇಕು, ಯಶೋದಮ್ಮ ಮತ್ತು 8ನೇ ತರಗತಿ ಮುಗಿಸಿರುವ ಮಗನ ಉನ್ನತ ವ್ಯಾಸಂಗದ ಹೊಣೆ ನಿಭಾಯಿಸಬೇಕಾಗಿದೆ.

‘ಮಗಳು ಯಶೋದಮ್ಮಳಿಗೆ 6ನೇ ತರಗತಿಯಿಂದ 10ನೇ ತರಗತಿ ತನಕ ಖರ್ಚಿಲ್ಲದೆ ಓದಿಸಿದೆ, ಈಗ ಆಕೆಗೆ ಪಿಯು ಶಿಕ್ಷಣ ಕೊಡಿಸಬೇಕು, ಆಕೆ ಅಲ್ಲಿ ಸಹ ಸಾಧನೆ ಮಾಡುವುದು ನಿಶ್ಚಿತ. ದಾನಿಗಳು ಒಂದಿಷ್ಟು ನೆರವಿಗೆ ಬಂದರೆ ಅನುಕೂಲವಾಗುತ್ತದೆ’ ಎಂದು ನೀಲಮ್ಮ (84313 35809) ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-25-666706234

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.