ಹುಲಕೋಟಿ: ರಾಜೇಶ್ವರಿ ವಿದ್ಯಾನಿಕೇತನ ಶಾಲೆಯು 2025-2026ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 10 ಫಲಿತಾಂಶ ದಾಖಲಿಸಿದೆ.

177 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಸ್ಥಾನ ಪಡೆದಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಶೇ 91ರಿಂದ 100 ಅಂಕಗಳನ್ನು, 41 ವಿದ್ಯಾರ್ಥಿಗಳು ಶೇ 81ರಿಂದ 90 ಅಂಕಗಳನ್ನು, 50 ವಿದ್ಯಾರ್ಥಿಗಳು ಶೇ 71ರಿಂದ 80 ಅಂಕಗಳನ್ನು ಪಡೆದು ಪ್ರಶಸ್ತಿ ಸಹಿತ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

38 ವಿದ್ಯಾರ್ಥಿಗಳು ಶೇ 61ರಿಂದ 70 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಶೇ 51ರಿಂದ 60 ಅಂಕಗಳನ್ನು ಪಡೆದು ದ್ವಿತೀಯ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ರಾಜೇಶ ಹೊಳೆಯಣ್ಣವರ ಶೇ 95 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಚಿನ್ಮಯ ಹಟ್ಟಿ ಹಾಗೂ ರಿಯಾನ್ ಅಹ್ಮದ್ ಶೇ 94.80 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಸೋಫಿ ಮೌಲ್ವಿ ಶೇ 94.60 ಅಂಕಗಳನ್ನು ಪಡೆದು ತೃತೀಯ ಸ್ಥಾನ, ಸಮರ್ಥ ಗಂಗಾಧರಯ್ಯ ಹೊಸಮಠ ಶೇ 93.60 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನ ಹಾಗೂ ಮಿಥುನ್ ವಾಕ್ರ ಶೇ 92.20 ಅಂಕಗಳನ್ನು ಪಡೆದು ಐದನೆಯ ಸ್ಥಾನ ಪಡೆದಿದ್ದಾರೆ.

ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲಾ ಸಂಸ್ಥಾಪಕ ಡಿ.ಆರ್.ಪಾಟೀಲ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಕೆ.ಪಾಟೀಲ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಿ.ಬಿ.ಓದುಗೌಡರ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಾಲೆಯ ಅಕಾಡೆಮಿಕ್ ಕಮಿಟಿ ಚೇರ್ಮನ್ ಪ್ರೊ. ಅನಿಲ ವೈದ್ಯ, ಪ್ರಾಚಾರ್ಯ ವಿ.ಎ.ರಾಯಭಟ್ಟನವರ, ಹಿರಿಯ ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ, ಪ್ರಕಾಶ ಸರ್ಮೊಕದಮ್ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-23-1354610203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.