ಹುಣಸಗಿ: ‘ಸಾಧನೆ ಎಂಬುದು ಸಾಧಕನ ಸ್ವತ್ತು. ಆದ್ದರಿಂದ ಸಾಧಿಸುವ ಛಲದೊಂದಿಗೆ ಎಲ್ಲ ವಿದ್ಯಾಥಿಗಳು ಒಳ್ಳೆಯ ಭವಿಷ್ಯದತ್ತ ಮುನ್ನಡೆಯರಿ’ ಎಂದು ಎಸ್ಡಿಎಂಸಿ ಅಧ್ಯಕ್ಷ ಗುರಣ್ಣ ಕ್ವಾಟಿ ಹೇಳಿದರು.

ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದ ಆದರ್ಶ ವಿದ್ಯಾಲಯಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಳಿಕ ಅವರು ಮಾತನಾಡಿದರು.

‘ನಿರಂತರ ಓದು ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸದ ನಡೆ ನಿಮ್ಮದಾಗಿದ್ದರೇ ನಿಮ್ಮ ಬುದ್ದಿಮಟ್ಟಕ್ಕೆ ಯಾರೂ ಸರಿ ಸಮರಾಗಲಾರರು. ಆದ್ದರಿಂದ ಮುಂದೆ ಕೂಡಾ ಚೆನ್ನಾಗಿ ಅಭ್ಯಾಸ ಮಾಡಿ’ ಎಂದರು. ಶಾಲೆಯ ಕನ್ನಡ ಶಿಕ್ಷಕ ಯಂಕನಗೌಡ ಅರಕೇರಿ ಮಾತನಾಡಿ, ‘ನಮ್ಮ ಶಾಲೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ 45 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ 100 ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳಾದ ಭಾರ್ಗವ ಕುಲಕರ್ಣಿ, ರಕ್ಷೀತಾ ಜಹಗಿರದಾರ, ಗುರುಬಾಯಿ, ಸುರಕ್ಷಾ, ನಂದಿತಾ, ಭಾಗ್ಯ, ಸನಾ ರೂಢಗಿ, ಆಶಾ ಹಿರೇಮಠ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ ಹಸನಸಾಬ ರೂಢಗಿ, ಶಾಲೆಯ ಶಿಕ್ಷಕರಾದ ವಿರೂಪಾಕ್ಷಪ್ಪ.ಬಿ. ಬಂಗಾರೆಪ್ಪ.ಜಿ, ಪ್ರಕಾಶ ಬಿರಾದಾರ, ತಿಮ್ಮಣ್ಣ ಕನ್ನೇಳ್ಳಿ ದತ್ತಾತ್ರೇಯ ಜಹಗಿರದಾರ, ಶಿವಾನಂದಸ್ವಾಮಿ, ಕಿಶನರಾವ್ ಜಹಗೀರದಾರ, ನಂದಯ್ಯಸ್ವಾಮಿ, ನಿರ್ಮಲಾ, ಶಿವು ಭಜನಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-30-1487625891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.