ರಬಕವಿ–ಬನಹಟ್ಟಿ: ಜಮಖಂಡಿ ಮತ್ತು ರಬಕವಿ ಬನಹಟ್ಟಿ ತಾಲ್ಲೂಕಿನ ಒಟ್ಟು 52 ಶಾಲೆಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರಷ್ಟು ಸಾಧನೆ ಯನ್ನು ಮಾಡಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ವಿದ್ಯಾರ್ಥಿಗಳು ರಬಕವಿ ಬನಹಟ್ಟಿ ಮತ್ತು ಜಮಖಂಡಿ ತಾಲ್ಲೂಕಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ತಿಳಿಸಿದರು.

ಅವರು ಗುರುವಾರ ಸಮೀಪದ ಪೂರ್ಣಪ್ರಜ್ಞೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸುಶಾಂತ ಬುರ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಈ ಬಾರಿ ಜಮಖಂಡಿ ಮತ್ತು ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಕೂಡಾ ಬಹಳಷ್ಟು ಸಹಕಾರ ನೀಡಿದ್ಧಾರೆ. ವಿದ್ಯಾರ್ಥಿಗಳು ಜೀವನ ದಲ್ಲಿ ಯಶಸ್ಸು ಸಾಧಿಸಬೇಕಾದರೆ ಸತತ ಪ್ರಯತ್ನ ಮತ್ತು ಪರಿಶ್ರಮ ಕೂಡಾ ಮುಖ್ಯ ವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಬಸನ್ನವರ ತಿಳಿಸಿದರು.

ಶಿಕ್ಷಣ ಇಲಾಖೆಯ ಬಿ.ಎಂ.ಹಳೆಮನಿ, ಬಿ.ಡಿ.ನೇಮಗೌಡ, ಮುಖ್ಯ ಶಿಕ್ಷಕ ಶಶಿಧರ ಹಟ್ಟಿ, ಶ್ರೀಶೈಲ ಕುಂಬಾರ, ಶ್ರೀಶೈಲ ಬುರ್ಲಿ, ಶೈಲಜಾ ಮಿರ್ಜೆ, ಬಾಬಾಗೌಡ ಪಾಟೀಲ, ಗಜಾನನ ಹತ್ತಳ್ಳಿ ಸೇರಿದಂತೆ ಅನೇಕರು ಇದ್ದರು.

ಬೀಳಗಿ: ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಗೆ 2025-26ನೇ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ 94ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 61 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೀರ್ತಿ ಗುಡದಿನ್ನಿ ಶೇ 90.24 ಕಾಲೇಜಿಗ ಪ್ರಥಮ ಸ್ಥಾನ, ಸುಧಾ ಲಮಾಣಿ ಶೇ 88.95 ದ್ವಿತೀಯ ಸ್ಥಾನ ಸ್ನೇಹಾ ಲಮಾಣಿ ಶೇ 83 ಅಂಕಗಳನ್ನು ಪಡೆದು ತೃತಿಯ ಸ್ಥಾನ ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರೌಢ ವಿಭಾಗದ ಉಪ ಪ್ರಾಚಾರ್ಯ ಎಸ್,ಎನ್,ಬಾಗಶೆಟ್ಟಿ, ಉಲ್ಲಾಸ ದೇವನಾಳ ಹಾಗೂ ಸಿಬ್ಬಂದಿ ವರ್ಗದವರನ್ನು ಸಂಘದ ಚೇರಮನ್ನ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ವಿ,ಜಿ ರೇವಡಿಗಾರ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾಲಿಂಗಪುರ: ಸಮೀಪದ ಅಕ್ಕಿ ಮರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 50 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಂಜನಾ ಲೋಗಾಂವಿ ಶೇ 96.64 (ಪ್ರಥಮ), ವಿಶ್ವನಾಥ ಸಂಕ್ರಟ್ಟಿ ಶೇ 92 (ದ್ವಿತೀಯ), ಅಕ್ಷತಾ ಕಂಬಾರ ಶೇ 90.88 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಎಸ್.ಎಂ.ಸುತಾರ ತಿಳಿಸಿದ್ದಾರೆ.

ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ತುಂಗಳ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಫಲಿತಾಂಶ ಶೇ. 100ರಷ್ಟು ಪಡೆದುಕೊಂಡಿದೆ.

ವಿದ್ಯಾರ್ಥಿ ವರ್ಷಾ ಉಪ್ಪಿನ 617 (ಶೇ.98.72) ಅಂಕ ಪಡೆದು ಶಾಲೆಗೆ ಪ್ರಥಮ, ಮಸಿರಾ ಮೊಮೀನ 616 (ಶೇ.98.56) ದ್ವಿತೀಯ, ಸ್ವಾತಿ ಕುಂಬಾರ, ವೈಷ್ಣವಿ ಅಪರಾಜ, ವಿಕಾಸ ಹಳೆಮನಿ 609 (ಶೇ. 97.44) ತೃತೀಯ, ತನ್ವಿ ಮಾಳಿ, ವರ್ಷಗುಂಜಿ 608 (ಶೇ.97.28),ಐಶ್ವರ್ಯ ಬಿರಾದರ 607 (ಶೇ.97.12) ಅಂಕ ಪಡೆದುಕೊಂಡಿದ್ದಾರೆ. ಹನ್ನೊಂದು ವಿದ್ಯಾರ್ಥಿಗಳು 600 (ಶೇ.96)ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

ಪರೀಕ್ಷೆ ಬರೆದ 94 ವಿದ್ಯಾರ್ಥಿಗಳಲ್ಲಿ76 ವಿದ್ಯಾರ್ಥಿಗಳು ಉತ್ತಮ ಶ್ರೇಣಿ, 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಸಂಸ್ಕೃತ ವಿಷಯದಲ್ಲಿ 17, ಕನ್ನಡಲ್ಲಿ 12, ಇಂಗ್ಲಿಷ 3, ಹಿಂದಿಯಲ್ಲಿ 9,ಗಣಿತದಲ್ಲಿ 2, ಸಮಾಜ ವಿಜ್ಞಾನದಲ್ಲಿ 4 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ. ಮುಖ್ಯಗುರು ಡಿ.ಜಿ.ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಂಪುರ: ಸಮೀಪದ ಬೆನಕಟ್ಟಿಯ ವಿಶ್ವಭಾರತಿ ಶಿಕ್ಷಣ ಸಮಿತಿಯ ಹೇಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಫಲಿತಾಂಶ 96.42 ರಷ್ಟಾಗಿದ್ದು, ವಿದ್ಯಾರ್ಥಿನಿ ಕೀರ್ತಿ ಕನಕಪ್ಪ ಮಾದರ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕೀರ್ತಿ ಮಾದರ ಶೇ.85.76 ಅಂಕ ಗಳಿಸಿ ಪ್ರಥಮಳಾದರೆ, ರಂಜಿತಾ ಹುಲಗಪ್ಪ ಪಾತ್ರೋಟಿ ಶೇ.81.76 ದ್ವಿತೀಯ ಮತ್ತು

ತಾಯವ್ವ ಹನಮಂತ ಮೇತ್ರಿ ಶೇ.80.32 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಎಂ.ಎ.ಮುನವಳ್ಳಿ ತಿಳಿಸಿದ್ದಾರೆ.

ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 89.13 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಕುಳಿತ 46 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬುಶೀರಾ ಮಾಲದಾರ ಶೇ 88.16 (ಪ್ರಥಮ), ಉಮೇರಾ ಅತ್ತಾರ ಶೇ 82.56 (ದ್ವಿತೀಯ), ಉಮಾಮಾ ಸೌದಾಗರ, ತೋಹಿರಾ ಜಮಾದಾರ ತಲಾ ಶೇ 74.40 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಎಸ್.ಎಚ್.ಸೊನೋನಿ ತಿಳಿಸಿದ್ದಾರೆ.

ರಾಂಪುರ: ಕಡ್ಲಿಮಟ್ಟಿಯ ಸಿದ್ದರಾಮೇಶ್ವರ ಪ್ರೌಢಶಾಲೆಯ ಫಲಿತಾಂಶ ಶೇ.95 ರಷ್ಟಾಗಿದ್ದು, ಕಾವ್ಯಾ ಬೇನಾಳ ಶೇ 92.48 ಪ್ರಥಮ, ಶೇ.83.84 ಅಂಕ ಗಳಿಸಿರುವ ಸಂಗಮ್ಮ ಮೇಟಿ ದ್ವಿತೀಯ ಹಾಗೂ ಶೇ.83.36 ಅಂಕ ಪಡೆದಿರುವ ಸೌಜನ್ಯ ಕಂಬಾರ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಎಚ್.ಗುಳೇದ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-19-921445856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.