ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಿಂದ 2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ 90 ಹಾಗೂ ಇದಕ್ಕಿಂತ ಹೆಚ್ಚು ಅಂಕ ಗಳಿಸಿರುವ ವೀರಶೈವ ಲಿಂಗಾಯತ/ ಲಿಂಗಾಯತ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಮಹಾಸಭೆಯ www.aivlm.org ವೆಬ್ಸೈಟಿನಲ್ಲಿ ಆನ್ಲೈನ್ ಮೂಲಕ ಮೇ 25ರೊಳಗೆ ಸಲ್ಲಿಸುವುದು. ಆನ್ಲೈನ್ ಮೂಲಕ ಬಂದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಅಂಚೆ ಅಥವಾ ಕೊರಿಯರ್ ಅಥವಾ ಖುದ್ದಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದ್ದಾರೆ.

ಕಲಬುರಗಿ: ವಿಶ್ವಕರ್ಮ ಸಮುದಾಯದ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಮೇ 31ರಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆಯಲಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

‘2025–26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ 75ಕ್ಕೂ ಮೇಲ್ಪಟ್ಟ ಅಂಕಗಳನ್ನು ಗಳಿಸಿದ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಶೋಕ ಎಸ್.ಪೊದ್ದಾರ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಒಟ್ಟು 800 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಗುರಿಯಿದೆ. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಟಿ.ಸಿ ಇಲ್ಲವೇ ಜಾತಿ ಪ್ರಮಾಣ ಪತ್ರ, ಭರ್ತಿ ಮಾಡಿದ ಪ್ರತಿಭಾ ಪುರಸ್ಕಾರ ನೋಂದಣಿ ಅರ್ಜಿ ಫಾರ್ಮ್ ಅನ್ನು ಸ್ಕ್ಯಾನ್ ಮಾಡಿ ಬೆಂಗಳೂರಿನ ಸುಂದರ್ ಪಿ. ಎಂಬುವರ ವಾಟ್ಸ್ಆ್ಯಪ್ ಸಂಖ್ಯೆ 98864 23935ಗೆ ಕಳುಹಿಸಬೇಕು’ ಎಂದು ಕೋರಿದರು.

ಸುಲೇಪೇಟೆಯ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ‘ಉತ್ತಮ ಅಂಕ ಸಾಧನೆ ಮಾಡಿದ ಸಮುದಾಯದ ಮಕ್ಕಳಿಗೆ ವಿವಿಧ ಸ್ವಾಮೀಜಿಗಳು, ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕೆಲವು ಕಿವಿಮಾತು ಹೇಳಲಿದ್ದಾರೆ. ಮಕ್ಕಳು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಏನೆಲ್ಲ ಮಾಡಬಹುದು ಎಂಬುದನ್ನು ಅವರಿಗೆ ಮಾರ್ಗದರ್ಶನ ಮಾಡಲಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಳಿದಾಸ ವಿಶ್ವಕರ್ಮ, ಶ್ರೀನಿವಾಸ ವಿಶ್ವಕರ್ಮ, ಭಾಗೇಶ ವಿಶ್ವಕರ್ಮ, ಸುಧಾಕರ ಪೊದ್ದಾರ, ರಾಮಚಂದ್ರ ವಿಶ್ವಕರ್ಮ, ಗುಂಡಪ್ಪ ವಿಶ್ವಕರ್ಮ, ಶಿವಲೀಲಾ ವಿಶ್ವಕರ್ಮ, ಅಶೋಕ ಪೊದ್ದಾರ ಸೇರಿದಂತೆ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-34-508870439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.