ಕಲಬುರಗಿ: ಎಸ್ಎಸ್ಎಲ್ಸಿ ಪರೀಕ್ಷೆ–1ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಶರಣಬಸವೇಶ್ವರ ವಸತಿ ಪಬ್ಲಿಕ್ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.

ಮೇಘನಾ ಮುರಘಾನೂರ, ಮಾಧವಿ ಮಠಪತಿ, ಸಾತ್ವಿಕ್ ಪಾಟೀಲ, ಪ್ರಜ್ವಲ್ ಪಾಟೀಲ, ವಿನಯ ಸಿಗ್ಗಿ, ಮೊಹಮ್ಮದ್ ತೌಫಿಕ್ಅಹ್ಮದ್, ವೈಷ್ಣವಿ ಕುಲಕರ್ಣಿ, ಶ್ರೇಯಸ್ ಪರಗೊಂಡ ಅವರಿಗೆ ಶಾಲು ಹೊದಿಸಿ, ಶರಣಬಸವೇಶ್ವರರ ಚಿತ್ರ ನೀಡಿ ಗೌರವಿಸಲಾಯಿತು.

ನಗರದ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಧಕ ಮಕ್ಕಳನ್ನು ಸತ್ಕರಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್.ಅಪ್ಪ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಹರಿಸಿದರು.

‘60 ವರ್ಷಗಳ ಹಿಂದೆ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರು ಕಂಡ ಕನಸು ಇದೀಗ ಫಲ ನೀಡುತ್ತಿದೆ. ಎಸ್ಬಿಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಗಳು ಪ್ರತಿ ವರ್ಷವೂ ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಟಾಪರ್ ಗಳಾಗಿ ಹೊರಹೊಮ್ಮುತ್ತಿದ್ದಾರೆ. ನಮ್ಮಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಈ ಫಲಿತಾಂಶ ಮುದ್ರೆಯೊತ್ತುತ್ತಿದೆ’ ಎಂದು ದಾಕ್ಷಾಯಣಿ ಅಪ್ಪ ಹರ್ಷ ವ್ಯಕ್ತಪಡಿಸಿದರು.

‘ಈ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಸ್ಬಿಆರ್ ಪಬ್ಲಿಕ್ ಶಾಲೆ ಕಲಬುರಗಿಯಲ್ಲಿ ತೆರೆಯಲಾಯಿತು. 5ನೇ ತರಗತಿಗಳಿಂದಲೇ ಜೆಇಇ, ನೀಟ್ನಂಥ ಕೋರ್ಸ್ಗಳ ಫೌಂಡೇಷನ್ ಕಲಿಕೆ ಪರಿಚಯಿಸಲಾಗಿದೆ. ಯುಪಿಎಸ್ಸಿ ಪರೀಕ್ಷೆಗಳಿಗೂ ಒತ್ತು ನೀಡಲಾಗುತ್ತಿದೆ’ ಎಂದು ವಿವರಿಸಿದರು.

‘ಸದ್ಯ ಟಾಪರ್ಗಳಾಗಿ ಹೊರ ಹೊಮ್ಮಿರುವ ವಿದ್ಯಾರ್ಥಿಗಳು ಆರಂಭಿಕ ಹಂತದಿಂದಲೂ ಎಸ್ಬಿಆರ್ನಲ್ಲೇ ಕಲಿತಿದ್ದಾರೆ. ಈಗಾಗಲೇ ಎಸ್ಬಿಆರ್ ಸ್ಕಾಲರ್ಶಿಫ್ ಪರೀಕ್ಷೆಗಳನ್ನೂ ಎದುರಿಸಿ ಉಚಿತ ಸೀಟುಗಳನ್ನೂ ಪಡೆದಿದ್ದಾರೆ’ ಎಂದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-34-1745943351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.