ಕಾಳಗಿ: ‘2025-26ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 95ರಷ್ಟು ಫಲಿತಾಂಶ ಸಾಧಿಸಿದ್ದು, ಪ್ರಸಕ್ತ ವರ್ಷ ಶೇ 100ರಷ್ಟು ಫಲಿತಾಂಶಕ್ಕೆ ಪ್ರಯತ್ನ ಮಾಡಲಾಗುವುದು’ ಎಂದು ಇಲ್ಲಿನ ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಮಹೇಶಕುಮಾರ ಬಡಿಗೇರ ಹೇಳಿದರು.

ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಶಿಕ್ಷಕರ ಪರಿಶ್ರಮ, ಎಸ್ಡಿಎಂಸಿ ಅವರ ಸಹಕಾರದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಈ ಬಾರಿಯೂ ಅದೇ ದಾರಿಯಲ್ಲಿ ಹೆಚ್ಚು ಪ್ರಯತ್ನಿಸಲಾಗುವುದು’ ಎಂದರು.

ಎಸ್ಡಿಎಂಸಿ ಸದಸ್ಯೆ ಶಿವಲೀಲಾ ಅಷ್ಟಗಿ ಮಾತನಾಡಿ ‘ವಿದ್ಯಾರ್ಥಿಗಳ ಉನ್ನತಿಗೆ ಎಸ್ಸೆಸ್ಸೆಲ್ಸಿ ತಿರುವಿನ ಹಂತವಾಗಿದೆ. ಪೋಷಕರು ಮಕ್ಕಳ ಕಾಳಜಿಯತ್ತ ಹೆಚ್ಚು ಗಮನಹರಿಸಿ ಅವರ ಉತ್ತಮ ಭವಿಷ್ಯದ ರಚನೆಗೆ ಕೈ ಜೋಡಿಸಬೇಕು’ ಎಂದರು.

ಶಿಕ್ಷಕ ಶಿವಕುಮಾರ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಗುಂಡಪ್ಪ ಕರೆಮನೋರ, ಸದಸ್ಯ ಅಮೃತ ನರನಾಳ ವೇದಿಕೆಯಲ್ಲಿದ್ದರು. ಶಿಕ್ಷಕ ಸೋಮು ಕುಂಬಾರ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು. ಇದಕ್ಕೂ ಮುಂಚೆ ಎಲ್ಲ ಮಕ್ಕಳಿಗೆ ದ್ವಾರಬಾಗಿಲದೊಳಗೆ ಗುಲಾಬಿ ಹೂವು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರದಲ್ಲಿ ಸಿಹಿ ಊಟ ಬಡಿಸಲಾಯಿತು.

ಶಿಕ್ಷಕ ಚಂದ್ರಕಾಂತ ಗೊಣಗಿಮಠ, ಭಗವಾನ ಕಟಕೆ, ಸುನಿತಾ ಚವಾಣ, ಝರೀನಾ ಜಬೀನ್, ಶಾಹೀನ್, ನಿಖತ್ ತಬಸುಮ್, ರೆಹನಾಬೇಗಂ, ಸಫಿಯಾಬೇಗಂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-31-1978421871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.