ಕಾಳಗಿ: ತಂದೆಯ ಸಾವಿನ ನೋವಿನಲ್ಲೂ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ. ತಾಲ್ಲೂಕಿನ ಮಂಗಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭವಾನಿ ಕಂಟೆಪ್ಪ ಪೂಜಾರಿ ಕಾಳಗಿ ಪರೀಕ್ಷಾ ಕೇಂದ್ರದಲ್ಲಿ ಹಿಂದಿ ವಿಷಯದ ಪರೀಕ್ಷೆ ಬರೆದಿದ್ದಾಳೆ.

ವಿದ್ಯಾರ್ಥಿನಿಯ ತಂದೆ ಕಂಟೆಪ್ಪ ಈರಣ್ಣ ಪೂಜಾರಿ ಅವರು, ಸೋಮವಾರ ಗ್ರಾಮಸ್ಥರೊಬ್ಬರ ಮದುವೆ ಸಂಬಂಧ ಶಹಾಬಾದ್ ತಾಲ್ಲೂಕಿನ ರಾವೂರ ಗ್ರಾಮಕ್ಕೆ ತೆರಳಿದ್ದರು. ಮದುವೆ ಮುಗಿಸಿ ವಾಪಸ್ ಮಂಗಲಗಿಗೆ ಬರುವಾಗ ಕಾರು ಚಿತ್ತಾಪುರ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಕಂಟೆಪ್ಪ ಸ್ಥಳದಲ್ಲೇ ಮೃತಪಟ್ಟು, ಇತರರು ಗಾಯಗೊಂಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೆ ಕುಟುಂಬಸ್ಥರು ಒಳಗಾಗಿದ್ದಾರೆ. ರಾತ್ರಿ ಮೃತದೇಹ ಮನೆಗೆ ಬರುತ್ತಿದ್ದಂತೆ ಮಡುಗಟ್ಟಿದ್ದ ಕುಟುಂಬದವರ ದುಃಖದ ಕಟ್ಟೆ ಒಡೆದಿದೆ. ರಾತ್ರಿಪೂರ್ತಿ ಕಣ್ಣೀರು ಹಾಕಿದ ಬಾಲಕಿ ಮಂಗಳವಾರ ಪರೀಕ್ಷೆ ಬರೆದು, ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು ನೋಡುಗರು ಮಮ್ಮಲ ಮರುಗುವಂತಿತ್ತು. ನೊಂದ ಬಾಲಕಿಗೆ ಶಾಲಾ ಶಿಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-34-2000045594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.