ಕಾಸರಗೋಡು: ಕೇರಳ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಕಾಸರಗೋಡು ಜಿಲ್ಲೆಗೆ ಶೇ 99.47 ಫಲಿತಾಂಶ ಬಂದಿದೆ.

20,537 ಮಕ್ಕಳು ಪರೀಕ್ಷೆಗೆ ಹಾಜರಾ ಗಿದ್ದು, 20,418 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ 10,624 ಬಾಲಕರು, 9,871 ಮಂದಿ ಬಾಲಕಿಯರು. 385 ಬಾಲಕರು, 808 ಬಾಲಕಿಯರು ಎಲ್ಲ ವಿಷಯಗಳಲ್ಲೂ ಎ-ಪ್ಲಸ್ ಶ್ರೇಣಿ ಪಡೆದಿದ್ದಾರೆ. ಜಿಲ್ಲೆಯ ಪರಿಶಿಷ್ಟ ಜಾತಿ ವಿಭಾಗದ ಮಕ್ಕಳಲ್ಲಿ 759 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 754 ಮಂದಿ ತೇರ್ಗಡೆಹೊಂದಿದ್ದಾರೆ. ಪರಿಶಿಷ್ಟ ಪಂಗಡದಲ್ಲಿ 1095 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 1089 ಮಂದಿ ತೇರ್ಗಡೆಹೊಂದಿದ್ದಾರೆ.

ಜಿಲ್ಲೆಯ 123 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. ಇವುಗಳಲ್ಲಿ 73 ಸರ್ಕಾರಿ ಶಾಲೆಗಳು, 24 ಅನುದಾನಿತ ಶಾಲೆಗಳು, 26 ಅನುದಾನ ರಹಿತ ಶಾಲೆಗಳು ಸೇರಿವೆ. ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪರೀಕ್ಷೆಗೆ ಹಾಜರಾದ ನಾಯನ್ಮಾರುಮೂಲೆ ತನ್ಬೀಹುಲ್ ಇಸ್ಲಾಮಿಕ್ ಹೈಯರ್ ಸೆಕೆಂಡರಿ ಶಾಲೆಗೆ ಶೇ 99.49 ಫಲಿತಾಂಶ ಲಭಿಸಿದೆ. ಇಲ್ಲಿ 785 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 781 ಮಂದಿ ತೇರ್ಗಡೆಹೊಂದಿದ್ದಾರೆ. ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶೇ 100 ಫಲಿತಾಂಶ ಬಂದಿದೆ. ಇಲ್ಲಿ 359 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅತಿ ಕಡಿಮೆ ವಿದ್ಯಾರ್ಥಿ ಗಳು ಪರೀಕ್ಷೆ ಬರೆದ ಎಡನೀರು ಸ್ವಾಮೀ ಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 25 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಕಾಸರಗೋಡು ಶೈಕ್ಷಣಿಕ ಉಪಜಿಲ್ಲೆಯಲ್ಲಿ ಒಟ್ಟು 11,398 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 5951 ಮಂದಿ ಬಾಲಕರು, 5447 ಮಂದಿ ಬಾಲಕಿಯರು ಇದ್ದಾರೆ. ಇಲ್ಲಿನ 81 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಕಾಞಂಗಾಡು ಶೈಕ್ಷಣಿಕ ಉಪಜಿಲ್ಲೆಯಲ್ಲಿ 9129 ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 4664 ಬಾಲಕರು, 4450 ಮಂದಿ ಬಾಲಕಿಯರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-2017976663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.