ಕೆಂಭಾವಿ: ‘ಸಮಾಜದಲ್ಲಿ ಬುದ್ಧಿವಂತರಿದ್ದರೂ ಒಳ್ಳೆಯ ಗುಣ ಹೊಂದಿದ ಮಕ್ಕಳು ಸಿಗುವುದು ಕಷ್ಟ. ಅಂಕ ಎಷ್ಟೇ ಪಡೆದರೂ ಸಂಸ್ಕಾರ ಇಲ್ಲದಿದ್ದರೆ ಅಡ್ಡದಾರಿ ಹಿಡಿಯುವ ಸಾಧ್ಯತೆಯಿದೆ. ಹೀಗಾಗಿ ಓದಿನ ಜೊತೆ ಸಂಸ್ಕಾರ ಮುಖ್ಯ’ ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.

ಪಟ್ಟಣದ ಸ್ಪಂದನಾಶಾಲೆಯ ಆವರಣದಲ್ಲಿ ಸ್ಪಂದನಾ ಗ್ರಾಮೀಣಭಿವೃದ್ಧಿ ಸಂಸ್ಥೆಯ ವತಿಯಿಂದ ಬುಧವಾರ ಯೋಜಿಸಿದ್ದ ದಿ. ಬಸವಂತ್ರಾಯ ಪಾಟೀಲ ಸ್ಮರಣಾರ್ಥ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೆಂಭಾವಿ ಪಟ್ಟಣದ ನಾಲ್ಕುಜನ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘ಶಿಕ್ಷಕರಾಗಿದ್ದ ಬಸವಂತ್ರಾಯ ಪಾಟೀಲ ಅವರು ತಮ್ಮ ಇಡೀ ಜೀವನವನ್ನು ಶಿಕ್ಷಣಕ್ಕಾಗಿ ಮುಡುಪಿಟ್ಟಿದ್ದರು, ಅವರಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದು. ಅವರ ಕುಟುಂಬದ ಸದಸ್ಯರು ಅದೇ ದಾರಿಯಲ್ಲಿ ಸಾಗಿದ್ದು ಸಂತಸ ತಂದಿದೆ’ ಎಂದು ಹೇಳಿದರು.

ದಸರಾ ಉತ್ಸವ ಸಮೀತಿ ಅಧ್ಯಕ್ಷ ಮಹಿಪಾಲರೆಡ್ಡಿಡಿಗ್ಗಾವಿ ಮಾತನಾಡಿ, ‘ಪ್ರತಿಭೆಯನ್ನು ಮೊದಲು ಗುರುತಿಸುವ ಕೆಲಸ ಮನೆಯಿಂದ ಆಗಬೇಕು. ನಂತರ ನೆರೆಹೊರೆಯವರು ಮತ್ತು ಮುಖ್ಯವಾಗಿ ಶಾಲೆಯಲ್ಲಿ ಶಿಕ್ಷ ಕರಿಂದ ಆಗಬೇಕಿದೆ. ಯಾವ ಮಕ್ಕಳೂ ಖಾಲಿ ಪುಸ್ತಕವಲ್ಲ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರೆ ಪ್ರತಿಭೆ ಹೊರಬರುತ್ತವೆ. ಅಂತಹ ಪ್ರತಿಭೆಗಳನ್ನು ಸಮಾಜದ ಕಣ್ಣುಗಳು ಗೌರವಿಸುತ್ತವೆ’ ಎಂದು ಹೇಳಿದರು.

ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು, ಡಿ. ಸಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಗುಂಡುಗೌಡ ಯಾಳಗಿ, ಮುದಿಗೌಡ ಮಾಲಿಪಾಟೀಲ, ಮಡಿವಾಳಪ್ಪಗೌಡ ಪೊಲೀಸ ಪಾಟೀಲ, ಸಂಗಣ್ಣ ತುಂಬಗಿ, ಸಾಹೇಬಲಾಲ ಆಂದೇಲಿ, ವಿಕಾಸ ಸೊನ್ನದ, ಸಂಗಣ್ಣ ಎಮ್ ತುಂಬಗಿ, ಮಧು ಬಂದೆ ವೇದಿಕೆ ಮೇಲಿದ್ದರು.

ಬಂದೇನವಾಜ ನಾಲತ್ವಾಡ ನಿರೂಪಿಸಿದರು, ಸುಗೂರಯ್ಯ ಇಚಿಡಿ ಸ್ವಾಗತಿಸಿದರು, ರೇವಣಸಿದ್ದಯ್ಯ ಮಠ ವಂದಿಸಿದರು.

ವಿದ್ಯಾರ್ಥಿಗಳಾದ ಶ್ವೇತಾ ಹಾಲಗಡ್ಲಿ, ಬದಿಹಾ ಅಫಾಫ್ ವಡಕೇರಿ, ನಿಶಾದ್ ವಡಕೇರಿ, ಮಹದ್ ಏಜಾಜ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರಹಾಗೂ ₹5 ಸಾವಿರ ನಗದು ನೀಡಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-30-1184802057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.