ಖಾನಾಪುರ: ‘ನಮ್ಮ ಶಾಲೆಗೆ ಬೀಡಿ ಗ್ರಾಮ ಪಂಚಾಯಿತಿಯಿಂದ ನಿತ್ಯ ಸರಬರಾಜು ಆಗುತ್ತಿದ್ದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ನಿಯಮಿತವಾಗಿ ಓದಿದ್ದರಿಂದ ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು, ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಲು ಸಾಧ್ಯವಾಯಿತು. ಪತ್ರಿಕೆಯಲ್ಲಿ ನಿತ್ಯ ಪ್ರಕಟಗೊಳ್ಳುತ್ತಿದ್ದ ದಿಕ್ಸೂಚಿ ಹೆಚ್ಚಿನ ಅಂಕ ಗಳಿಕೆಗೆ ಅನುಕೂಲವಾಗಿದೆ’ ಎಂದು ಬೀಡಿ ಗ್ರಾಮದ ಹೋಲಿಕ್ರಾಸ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ ದೇಸಾಯಿ ಹೇಳಿದರು.

ಮಾಜಿ ಶಾಸಕ ಅರವಿಂದ ಪಾಟೀಲ, ಹೋಲಿಕ್ರಾಸ್ ಶಾಲೆಯ ಮುಖ್ಯ ಶಿಕ್ಷಕರು, ಕುಟುಂಬದ ಸದಸ್ಯರು ಮತ್ತು ಹಿತೈಷಿಗಳಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವ್ಯಾ, ‘ಅಂದಿನ ಪಾಠವನ್ನು ಅಂದೇ ಓದಿ ಮನನ ಮಾಡಿಕೊಳ್ಳುವುದು ಮತ್ತು ಪ್ರತಿ ವಾರಾಂತ್ಯದಲ್ಲಿ ಪುನರಾವರ್ತನೆ ಮಾಡುವುದು ನನ್ನ ರೂಢಿ. ಕಾರಣ ನನಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು’ ಎಂದರು.

ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ‘ಮಧ್ಯಮ ವರ್ಗದ ಕುಟುಂಬದಿಂದ ಬಂದ ದಿವ್ಯಾ ಪರಿಶ್ರಮದಿಂದ ಸಾಧನೆ ತೋರಿದ್ದಾರೆ’ ಎಂದರು. ಶಿಕ್ಷಕರು, ಕುಟುಂಬದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-1404182225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.