ಕೋಲಾರ: ಕೋಲಾರದ ಚಿನ್ಮಯ ವಿದ್ಯಾಲಯದ ಕೆ.ಎನ್.ಲಕ್ಷ್ಮಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಹಾಗೂ ಜಿಲ್ಲೆಗೆ ಅಗ್ರಸ್ಥಾನ ಪಡೆದ ಸಾಧನೆಗೆ ಭಾಜನರಾಗಿದ್ದಾರೆ.

ಜಿಲ್ಲೆಯು ಈ ಬಾರಿ ಶೇ 95.50 ಅಂಕಗಳೊಂದಿಗೆ 13ನೇ ಸ್ಥಾನ ಪಡೆದು ಅಲ್ಪ ಸುಧಾರಣೆ ಕಂಡಿದೆ. ಶೇಕಡವಾರು ಫಲಿತಾಂಶ ಗಣನೀಯವಾಗಿ ಏರಿಕೆ ಆಗಿದೆ. ಅದರೆ, ಹತ್ತರೊಳಗಿನ ಸ್ಥಾನದ ಕನಸು ಈಡೇರಿಲ್ಲ. 2024–25ನೇ ಸಾಲಿನಲ್ಲಿ ಶೇ 68.37 ಅಂಕಗಳೊಂದಿಗೆ 14ನೇ ಸ್ಥಾನ ಪಡೆದಿತ್ತು.

ಹೊಸದಾಗಿ ಪರೀಕ್ಷೆ ಬರೆದಿದ್ದ 17,874 ವಿದ್ಯಾರ್ಥಿಗಳ ಪೈಕಿ 17,069 ಮಂದಿ ಉತ್ತೀರ್ಣರಾಗಿದ್ದಾರೆ. ಈ ಸಲವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ 93.57 ಬಾಲಕರು ಉತ್ತೀರ್ಣರಾಗಿದ್ದರೆ, ಶೇ 97.33 ಬಾಲಕಿಯರು ತೇರ್ಗಡೆಯಾಗಿದ್ದಾರೆ. ತಾಲ್ಲೂಕುವಾರು ಶ್ರೀನಿವಾಸಪುರ ಮೊದಲ ಸ್ಥಾನ, ಕೆಜಿಎಫ್ ಕೊನೆ ಸ್ಥಾನ ಪಡೆದಿವೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯ 65 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು.

ಇಬ್ಬರು ವಿದ್ಯಾರ್ಥಿಗಳು 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುಳಬಾಗಿಲಿನ ಅಮರಜ್ಯೋತಿ ಪ್ರೌಢಶಾಲೆಯ ಎ.ಎಸ್.ಜೀವಿಕಾ ಹಾಗೂ ಚಿನ್ಮಯ ವಿದ್ಯಾಲಯದ ಡಿ.ಖುಷ್ವಂತ್ ಈ ಸಾಧನೆ ಮಾಡಿದ್ದಾರೆ. ಸುಮಾರು 20 ವಿದ್ಯಾರ್ಥಿಗಳು 622 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ಬಾರಿ 805 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. 365 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 3,352 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 8,401 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3,052 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಗೆ ಮೊದಲ ಎರಡು ಸ್ಥಾನ ಗಳಿಸಿ ಕೊಟ್ಟಿರುವ ಚಿನ್ಮಯ ವಿದ್ಯಾಲಯ ಶೇ 100 ಫಲಿತಾಂಶ ಸಾಧನೆ ಮಾಡಿದೆ. ಪರೀಕ್ಷೆ ಬರೆದಿದ್ದ ಎಲ್ಲಾ 220 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ, ಶಿಕ್ಷಣಾಧಿಕಾರಿ ಎಸ್.ಆರ್.ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ನಾಹಿದಾ ಫಾತಿಮಾ, ಬಿಇಒ ಮಧುಮಾಲತಿ ಪಡುವಣೆ, ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಬಬಿತಾ, ತಾಂತ್ರಿಕ ಸಹಾಯಕ ಶರಣಪ್ಪ ಹಾಗೂ ಎಲ್ಲಾ ತಾಲ್ಲೂಕುಗಳ ಶಿಕ್ಷಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-18-589525446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.