ಕೋಲಾರ: ಜಿಲ್ಲೆಯ 65 ಕೇಂದ್ರಗಳಲ್ಲಿ ಸೋಮವಾರ ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆ ನಡೆದಿದ್ದು, 355 ಮಕ್ಕಳು ಗೈರಾಗಿದ್ದರು. ಶೇ 98.83 ಹಾಜರಾತಿಯೊಂದಿಗೆ ಎರಡನೇ ಪರೀಕ್ಷೆಯೂ ಸುಸೂತ್ರವಾಗಿ ನಡೆದಿದೆ.

ವಿಜ್ಞಾನ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 19,121 ವಿದ್ಯಾರ್ಥಿಗಳ ಪೈಕಿ 18,897 ಮಂದಿ ಹಾಜರಾಗಿದ್ದರು.

ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಯಾವುದೇ ಕೇಂದ್ರದಲ್ಲಿ ಅವ್ಯವಹಾರ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ವೆಬ್ ಕ್ಯಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯುತ್ತಿರುವ ಪರೀಕ್ಷೆ ಇದಾಗಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದೃಶ್ಯಾವಳಿಗಳನ್ನು ಅಧಿಕಾರಿಗಳು ವೀಕ್ಷಿಸಿದರು. ಯಾವುದೇ ಲೋಪ ಕಂಡು ಬಂದಿಲ್ಲ.

ಬಂಗಾರಪೇಟೆ ತಾಲ್ಲೂಕಿನ 8 ಕೇಂದ್ರಗಳಲ್ಲಿ ವಿಜ್ಞಾನ ವಿಷಯಕ್ಕೆ 2,545 ಮಂದಿ ನೋಂದಾಯಿಸಿದ್ದು, 22 ಮಂದಿ ಗೈರಾಗಿದ್ದರು. ಕೆಜಿಎಫ್ ತಾಲ್ಲೂಕಿನ 9 ಕೇಂದ್ರಗಳಲ್ಲಿ 3,314 ಮಕ್ಕಳು ಹೆಸರು ನೋಂದಾಯಿಸಿದ್ದು, 39 ಮಂದಿ ಪರೀಕ್ಷೆಗೆ ಬಂದಿರಲಿಲ್ಲ.

ಕೋಲಾರ ತಾಲ್ಲೂಕಿನ 18 ಕೇಂದ್ರಗಳಲ್ಲಿ 4,830 ಮಂದಿ ಹೆಸರು ನೋಂದಾಯಿಸಿದ್ದು, 47 ಮಂದಿ ಗೈರಾಗಿದ್ದರು. ಮಾಲೂರು ತಾಲ್ಲೂಕಿನ 8 ಕೇಂದ್ರಗಳಲ್ಲಿ 3,005 ಮಂದಿ ಹೆಸರು ನೋಂದಾಯಿಸಿದ್ದು, 37 ಮಂದಿ ಗೈರಾಗಿದ್ದರು. ಮುಳಬಾಗಿಲು ತಾಲ್ಲೂಕಿನ 12 ಕೇಂದ್ರಗಳಲ್ಲಿ 2,868 ಮಂದಿ ನೋಂದಾಯಿಸಿದ್ದು, 57 ಮಂದಿ ಹಾಜರಾಗಿರಲಿಲ್ಲ. ಶ್ರೀನಿವಾಸಪುರ ತಾಲ್ಲೂಕಿನ 10 ಕೇಂದ್ರಗಳಲ್ಲಿ 2,559 ಮಂದಿ ಹೆಸರು ನೋಂದಾಯಿಸಿದ್ದು, 22 ಮಂದಿ ಗೈರಾಗಿದ್ದರು.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ನಿರ್ದೇಶಕ ಎಂ.ಆರ್.ಮಾರುತಿ, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ಸೈಹಿದಾ ನಾಹಿದಾ ಫಾತಿಮಾ, ಬಿಇಒಗಳಾದ ಮಧುಮಾಲತಿ ಪಡುವಣೆ, ಶಶಿಕಲಾ, ನಾರಾಯಣಸ್ವಾಮಿ, ಕೆಂಪಯ್ಯ, ರಾಮಚಂದ್ರ, ಮುನಿಲಕ್ಷ್ಮಯ್ಯ, ಎವೈಪಿಸಿ ಗಾಯತ್ರಿ, ವಿಷಯ ಪರಿವೀಕ್ಷಕರು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾರ್ಚ್ 25ರಂದು ದ್ವಿತೀಯ ಭಾಷೆ ಪರೀಕ್ಷೆ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-18-1617005298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.