ಬೇತಮಂಗಲ: ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಹಾಗೂ ಕೆರೆಮಿಂಡಹಳ್ಳಿಯ ಸಾಧಕ ವಿದ್ಯಾರ್ಥಿಗಳನ್ನು ಮಹದೇವಪುರದಲ್ಲಿ ಮುಖಂಡ ವಿ.ಮೋಹನ್ ಕೃಷ್ಣ ಅವರು ಸತ್ಕರಿಸಿದರು.

ಈ ವೇಳೆ ಮಾತನಾಡಿದ ಅವರು, ಕೆಜಿಎಫ್ ತಾಲ್ಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದರೆ ₹50 ಸಾವಿರ ಬಹುಮಾನ ನೀಡುವುದಾಗಿ ನೀಡಿದ್ದ ಭರವಸೆಯಂತೆ 621 ಅಂಕ ಗಳಿಸಿರುವ ಬೇತಮಂಗಲದ ವಿದ್ಯಾರ್ಥಿನಿ ಹಾರಿಕಾ ರೆಡ್ಡಿಗೆ ಅವರಿಗೆ ನೀಡುವುದಾಗಿ ಘೋಷಿಸಿದರು.

ಮುಂದಿನ ದಿನಗಳಲ್ಲಿ ಪಿಯು ಹಂತದಲ್ಲೂ ಇದೇ ರೀತಿಯ ಸಾಧನೆ ಮಾಡಿ, ಉತ್ತಮ ಅಧಿಕಾರಿಗಳಾಗಿ ದೇಶದ ಸತ್ಪ್ರಜೆಗಳಾಗಿ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಿರೆಡ್ಡಿ, ಲಕ್ಷ್ಮಮ್ಮ, ಗುತ್ತಿಗೆದಾರ ಕೃಷ್ಣಪ್ಪ, ಶುಗರ್ ಕೃಷ್ಣಪ್ಪ, ಕಿಟ್ಟಪ್ಪ, ಆನಂದ್ ರೆಡ್ಡಿ, ಶ್ರೀನಾಥ್, ಕಾರ್ತಿಕ್, ಗೋವಿಂದಪ್ಪ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-2112213395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.