ಕೋಲಾರ: ಎಸ್ಎಸ್ಎಲ್ಸಿ ತೃತೀಯ ಭಾಷೆ (ಹಿಂದಿ) ವಿಷಯದ ವಾರ್ಷಿಕ ಪರೀಕ್ಷೆ ಮಂಗಳವಾರ ನಡೆದಿದ್ದು, 203 ವಿದ್ಯಾರ್ಥಿಗಳು ಗೈರಾಗಿದ್ದರು. ಶೇ 98.92 ಹಾಜರಾತಿಯೊಂದಿಗೆ ಐದನೇ ಪರೀಕ್ಷೆಯೂ ಸುಗಮಮವಾಗಿ ನಡೆದಿದೆ.

ತೇರ್ಗಡೆಗೆ ತೃತೀಯ ಭಾಷೆಯ ಅಂಕ ಮಾನದಂಡವಲ್ಲ ಎಂದು ರಾಜ್ಯ ಸರ್ಕಾರ ಈಚೆಗೆ ಘೋಷಿಸಿದೆ.

ಜಿಲ್ಲೆಯ 65 ಕೇಂದ್ರಗಳಲ್ಲಿ ನಡೆದ ತೃತೀಯ ಭಾಷೆ ಪರೀಕ್ಷೆಗೆ 18,768 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ 18,565 ಮಂದಿ ಹಾಜರಾಗಿದ್ದರು.

ಪರೀಕ್ಷೆಯು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಯಾವುದೇ ಅವ್ಯವಹಾರ ವರದಿ ಆಗಿಲ್ಲ ಎಂದು ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ, ವೆಬ್ ಕ್ಯಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯುತ್ತಿರುವ 4ನೇ ವರ್ಷದ ಪರೀಕ್ಷೆ ಇದಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳು ವೀಕ್ಷಣೆಯಲ್ಲಿ ತೊಡಗಿದ್ದರು.

ಬಂಗಾರಪೇಟೆ ತಾಲ್ಲೂಕಿನ 8 ಕೇಂದ್ರಗಳಲ್ಲಿ ತೃತೀಯ ಭಾಷೆ ವಿಷಯಕ್ಕೆ 2,476 ಮಂದಿ ನೋಂದಾಯಿಸಿದ್ದು, 20 ಮಂದಿ ಗೈರಾಗಿದ್ದರು. ಕೆಜಿಎಫ್ ತಾಲ್ಲೂಕಿನ 9 ಕೇಂದ್ರಗಳಲ್ಲಿ 3,231 ಮಕ್ಕಳು ಹೆಸರು ನೋಂದಾಯಿಸಿದ್ದು, 36 ಮಂದಿ ಬಂದಿರಲಿಲ್ಲ.

ಕೋಲಾರ ತಾಲ್ಲೂಕಿನ 18 ಕೇಂದ್ರಗಳಲ್ಲಿ 4,764 ಮಂದಿ ಹೆಸರು ನೋಂದಾಯಿಸಿದ್ದು, 41 ಮಂದಿ ಗೈರಾಗಿದ್ದರು. ಮಾಲೂರು ತಾಲ್ಲೂಕಿನ 8 ಕೇಂದ್ರಗಳಲ್ಲಿ 2,941 ಮಂದಿ ಹೆಸರು ನೋಂದಾಯಿಸಿದ್ದು, 31 ಮಂದಿ ಬಂದಿರಲಿಲ್ಲ.

ಮುಳಬಾಗಿಲು ತಾಲ್ಲೂಕಿನ 12 ಕೇಂದ್ರಗಳಲ್ಲಿ 2,804 ಮಂದಿ ನೋಂದಾಯಿಸಿದ್ದು, 54 ಮಂದಿ ಗೈರಾಗಿದ್ದರು. ಶ್ರೀನಿವಾಸಪುರ ತಾಲ್ಲೂಕಿನ 10 ಕೇಂದ್ರಗಳಲ್ಲಿ 2,552 ಮಂದಿ ಹೆಸರು ನೋಂದಾಯಿಸಿದ್ದು, 21 ಮಂದಿ ಬಂದಿರಲಿಲ್ಲ.

ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳದವರು ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ವರೆಗೆ ನಿರ್ಬಂಧ ವಿಧಿಸಲಾಗಿತ್ತು.

ಏ.2ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಅದು ಎಸ್ಎಸ್ಎಲ್ಸಿ–1ರ ಕೊನೆಯ ಪರೀಕ್ಷೆ ಆಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-18-720725085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.