ಕೆ.ಆರ್.ಪೇಟೆ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಪಟ್ಟಣದ ಆಚಾರ್ಯ ವಿದ್ಯಾಶಾಲೆಯ ವಿದ್ಯಾಥಿ೯ನಿ ಎಲ್.ವೈ.ಲಾವಣ್ಯಗೆ 625ಕ್ಕೆ 623 (ಶೇ 99.68) ಅಂಕ ಪಡೆದಿದ್ದು, ರಾಜ್ಯಕ್ಕೆ ತೃತೀಯ ಸ್ಥಾನ, ಜಿಲ್ಲೆ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಲಾವಣ್ಯಗೆ ಈ ಹಿಂದೆ ಕನ್ನಡದಲ್ಲಿ 124, ಹಿಂದಿಯಲ್ಲಿ 99, ಗಣಿತ–99, ಸಮಾಜವಿಜ್ಞಾನ–99 ಹಾಗೂ ಇಂಗ್ಲಿಷ್ನಲ್ಲಿ 99 ಅಂಕಗಳು ಸೇರಿ ಒಟ್ಟು 619 ಅಂಕಗಳು ಬಂದಿದ್ದವು. ಮರು ಮೌಲ್ಯಮಾಪನದಲ್ಲಿ ಗಣಿತ, ವಿಜ್ಞಾನ, ಕ್ನನಡ ಮತ್ತು ಇಂಗ್ಲಿಷ್ ವಿಷಯಗಳಿಗೆ ತಲಾ 1 ಅಂಕಗಳು ಬಂದಿವೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ, ಎಸ್ಎಸ್ಎಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಹರೀಶ್, ಶಿಕ್ಷಣ ಸಂಯೋಜಕ ಸುರೇಶ್ ಆಚಾರ್ಯ, ವಿದ್ಯಾಶಾಲೆಯ ಅಧ್ಯಕ್ಷ ಜಿ. ಅರವಿಂದ್ ರಾವ್, ವ್ಯವಸ್ಥಾಪಕ ನಿರ್ದೇಶಕ, ಸೈಯದ್ ತಬ್ರೇಜ್ ನದೀಮ್, ಪ್ರಾಂಶುಪಾಲೆ ಹುದಾ ಫಾತಿಮ ಡೆಲ್ವಿ, ಆಡಳಿತಾಧಿಕಾರಿ ಕೆ.ಎಸ್.ನಾಗೇಶ್ ಬಾಬು ಮತ್ತು ಶಿಕ್ಷಕರು ಸನ್ಮಾನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-40-838287558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.