ಕೆ.ಆರ್. ಪೇಟೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 97.89 ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲಾಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.

ತಾಲ್ಲೂಕಿಲ್ಲಿ 56 ಪ್ರೌಢಶಾಲೆಗಳಿದ್ದು 2,422 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 2,371 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಪೈಕಿ 1,132 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ವಿದ್ಯಾರ್ಥಿನಿಯರಲ್ಲಿ 1,239 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಆಶೀರ್ವಾದ ಶಾಲೆಯ ಚರಣ್ಯ ಶೇ99.2 ಮತ್ತು ಧನ್ಯತಾ ಶೇ 99.2 ಅಂಕಗಳನ್ನು ಪಡೆದು ಪ್ರಥಮ ಟಾಪರ್ ಆಗಿದ್ದಾರೆ. ಆಚಾರ್ಯ ಶಾಲೆಯ ಎಲ್ .ವೈ .ಲಾವಣ್ಯ ಶೇ99.04 ಅಂಕ ಪಡೆದಿದ್ದಾಳೆ. ಮಾದಾಪುರ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಜಿ.ಎಸ್. ರಮ್ಯಾ ಶೇ98.88 ಅಂಕಗಳನ್ನು ಪಡೆದಿದ್ದಾರೆ. ಅದೇ ರೀತಿ ಕೆ .ಆರ್ .ಪೇಟೆ ಪಟ್ಟಣದ ಎಸ್.ಎಸ್.ಕೆ.ಸಿ ಪ್ರೌಢಶಾಲೆಯ ಎಂ.ಕೆ . ಭಾನುಜ ಶೇ98.88 ಅಂಕಗಳನ್ನು ಪಡೆದಿದ್ದಾಳೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಅತ್ಯತ್ತಮ ಫಲಿತಾಂಶ: ತಾಲ್ಲೂಕಿನ ಬಹುತೇಕ ಸರ್ಕಾರಿ ಪ್ರೌಢಶಾಲೆಗಳಿಗೆ ಅತ್ಯತ್ತಮ ಫಲಿತಾಂಶ ಲಭಿಸಿದೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಮಡುವಿನಕೋಡಿ ಶಾಲೆ ಸೇರಿದಂತೆ ಬಹುತೇಕ ಶಾಲೆಗಳು ಶೇ 100 ರಷ್ಟು ಫಲಿತಾಂಶ ದಾಖಲಿಸಿವೆ. ಇಡೀ ತಾಲ್ಲೂಕಿನಲ್ಲಿ ಕೇವಲ 51 ವಿದ್ಯಾರ್ಥಿಗಳು ಮಾತ್ರ ನಪಾಸಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾನುಪ್ರಕಾಶ್ ಪ್ರೌಢಶಾಲೆಗೆ ಶೇ100 ಫಲಿತಾಂಶ: ಪಟ್ಟಣದ ಭಾನುಪ್ರಕಾಶ್ ಪ್ರೌಢಶಾಲೆಗೆ ಶೇಕಡಾ 100 ರಷ್ಟು ಫಲಿತಾಂಶ ಲಭ್ಯವಾಗಿದೆ. ಶಾಲೆಯಲ್ಲಿ 9 ವಿದ್ಯಾರ್ಥಿಗಳು ಉನ್ನತ ಶ್ರಣಿಯಲ್ಲಿ ತೇರ್ಗಡೆ ಹೊಂದಿದ್ದು ಲಾವಣ್ಯ 601, ಅಭಿಷೇಕ್ 587, ಭಾನುಶ್ರೀ 598 ಅಂಕಗಳನ್ನು ಪಡೆದಿದ್ದಾರೆಂದು ಸವಿತಾ ರಮೇಶ್ ತಿಳಿಸಿದ್ದಾರೆ.

ಪ್ರಗತಿ ಪ್ರೌಢಶಾಲೆ ಶೇ100 ರಷ್ಟು ಫಲಿತಾಂಶ: ಪಟ್ಟಣದ ಪ್ರಗತಿ ಪ್ರೌಢಶಾಲೆ ಶೇ 100 ಫಲಿತಾಂಶ ಪಡೆದಿದೆ. ಆರ್. ದಿಶಾಂತ್- 527, ಬಿ.ಆರ್. ಗೋವರ್ಧನ್ -517, ಗೌರೀಶ್ ಆರಾಧ್ಯ- 510, ಭರತ್ ಕುಮಾರ್- 493, ಕೀರ್ತನ- 384 ಅಂಕಗಳನ್ನು ಪಡೆದಿದ್ದಾರೆಂದು ಕೆ.ಕಾಳೇಗೌಡ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-40-2027112358

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.