ರಾಯಚೂರು: ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣಾ ಮಂಡಲದ ಜಿಲ್ಲಾ ಪರಿಷತ್ ಉನ್ನತ ಪಾಠ ಶಾಲೆ (ಕನ್ನಡ ಮಾಧ್ಯಮ) ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸತತ 5 ವರ್ಷಗಳಿಂದ ಶೇ 100ರಷ್ಟು ಫಲಿತಾಂಶ ಪಡೆಯುತ್ತ ಬಂದಿದೆ.

ಈ ಬಾರಿ ಪರೀಕ್ಷೆಗೆ ಹಾಜರಾದ 67 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು: ಗಾಯತ್ರಿ ವಿಶ್ವಕರ್ಮ 600 ಅಂಕಗಳಿಗೆ 548, ಕುಲಸುಂಬೀ 547 ಅಂಕ, ಉಪ್ಪಾರ್ ಲಕ್ಷ್ಮೀ 541, ಜಮುನಾ 540 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.

ಕನ್ನಡ ವಿಷಯದಲ್ಲಿ ಮೆರುಗು: ಕನ್ನಡ ವಿಷಯದಲ್ಲಿ 19 ವಿದ್ಯಾರ್ಥಿಗಳು 90ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವುದು ಗಮನಾರ್ಹ. ಈ ಪೈಕಿ ಜಮುನಾ 98 ಅಂಕ, ಗಾಯತ್ರಿ ವಿಶ್ವಕರ್ಮ 99, ಉಪ್ಪಾರ್ ಲಕ್ಷ್ಮೀ 97, ನಂದಿತಾ, ಶಾಲಿನಿ, ನಂದಿನಿ, ಪುಟ್ಟಿಭಾಗ್ಯ, ಕುಲಸುಂಬಿ, ಮಲ್ಲಿಕಾರ್ಜುನ ಮೊನಪ್ಪ ತಲಾ 96 ಅಂಕಗಳನ್ನು ಪಡೆದಿದ್ದಾರೆ. ಆ ಮೂಲಕ ತೆಲುಗು ಭಾಷೆಯ ಪ್ರಭಾವದ ಮಧ್ಯೆ ಕನ್ನಡದ ಕಂಪು ಪಸರಿಸಿದ್ದಾರೆ.

ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಮುಂದಿನ ಓದಿಗೆ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗೆ ತೆರಳುತ್ತಾರೆ. ಅವರಿಗೆ ವಸತಿ ಶಾಲೆಗಳಲ್ಲಿ ಪ್ರವೇಶ, ಸಾರಿಗೆ ಹಾಗೂ ಇತರೆ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗದಂತೆ ಅನುಕೂಲ ಮಾಡಿಕೊಡಬೇಕು’ ಎಂದು ಕೃಷ್ಣಾ ಮಂಡಲದ ಶಿಕ್ಷಣಾಧಿಕಾರಿ ನಿಜಾಮುದ್ದೀನ್, ಮುಖ್ಯಶಿಕ್ಷಕ ಕಿಶೋರ ಕುಮಾರ ಹಾಗೂ ಗಡಿನಾಡಿನ ಸಂಘ ಮನವಿ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-32-859636581

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.