ಕುಂದಾಪುರ: ‘ಎಸ್ಎಸ್ಎಲ್ಸಿ ಪರೀಕ್ಷೆಗೆ ಬರೆದ ಕುಂದಾಪುರ ಶಿಕ್ಷಣ ವಲಯದ 46 ಶಾಲೆಗಳ ಒಟ್ಟು 2,747 ವಿದ್ಯಾರ್ಥಿಗಳ ಪೈಕಿ, 2,708 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ 98.5 ಫಲಿತಾಂಶ ದಾಖಲಿಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ತಿಳಿಸಿದ್ದಾರೆ.

ವಲಯದ 28 ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. ಶಂಕರನಾರಾಯಣ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರೀತಂ ಜಿ. ಪೂಜಾರಿ 625 ಅಂಕ ಗಳಿಸಿದ್ದಾರೆ. ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನ್ವರ್ಥ ಎಸ್. ಪೂಜಾರಿ 624, ಸಾತ್ವಿಕ್ ಭಟ್, ತಕ್ಷಾ ಶೆಟ್ಟಿ ಮತ್ತು ಪ್ರಾರ್ಥನಾ ತಲಾ 623 ಅಂಕ ಪಡೆದುಕೊಂಡಿದ್ದಾರೆ.

ಯಡಾಡಿ- ಮತ್ಯಾಡಿಯವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಮೀಕ್ಷಾ 621, ಕಾಳಾವರದ ಸರ್ಕಾರಿ ಪ್ರೌಢಶಾಲೆಯ ಮನೋಜ್ 616, ಅಮಾಸೆಬೈಲು ಸರ್ಕಾರಿ ಪ್ರೌಢಶಾಲೆಯ ಧನು 613, ಬಿದ್ಕಲ್ಕಟ್ಟೆಯ ಕೆಪಿಎಸ್ನ ದೀಕ್ಷಾ 613, ಹಾಲಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಜಯ್ಕುಮಾರ 610, ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ನಾಗಶ್ರೀ 610, ಬಸ್ರೂರು ಸರ್ಕಾರಿ ಪ್ರೌಢಶಾಲೆಯ ಕೀರ್ತನಾಉಳ್ಳೂರು 602, ಕಂಡ್ಲೂರು ಸರ್ಕಾರಿ ಪ್ರೌಢಶಾಲೆಯ ಸಮರ್ಥ 615, ಶ್ರದ್ಧಾ ಪೂಜಾರಿ 611, ರಚಿತಾ ಡೇಸಾ 603 ಅಂಕ ಪಡೆದುಕೊಂಡಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗಗಳ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಶೇ 90.91ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸುವ ಮೂಲಕ ಕುಂದಾಪುರ ಶಿಕ್ಷಣ ವಲಯದ ಗೌರವ ಹೆಚ್ಚಿಸಿದ್ದಾರೆ ಎಂದು ಬಿಇಒ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-28-1458380944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.