ಲಿಂಗಸುಗೂರು: ವಿದ್ಯಾರ್ಥಿಗಳಲ್ಲಿ ಉನ್ನತ ಮಟ್ಟದ ಗುರಿ ಇರಬೇಕು ಹಾಗೂ ಅದನ್ನು ಸಾಧಿಸುವ ಛಲ ಇರಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ ಹೇಳಿದರು.

ಪಟ್ಟಣದ ಶಾದಿ ಮಹಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಆದಿಲ್ ಮೊಬೈಲ್ಸ್ನ 15 ನೇ ವಾರ್ಷಿಕೋತ್ಸವದ ಪ್ರಯುಕ್ತ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 85 ಕ್ಕಿಂತ ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉನ್ನತ ಶಿಕ್ಷಣವನ್ನು ಪಡೆಯಲು ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ತಮ್ಮ ನಿರ್ದಿಷ್ಟ ಗುರಿಗಳನ್ನು ತಲುಪಲು ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಅವರು ತಮ್ಮ ಅಧ್ಯಯನದತ್ತ ಗಮನಹರಿಸಬೇಕು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬದ್ಧತೆಯನ್ನು ತೋರಿಸಬೇಕು. ಆದಿಲ್ ಮೊಬೈಲ್ ಅಂಗಡಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ತಾಲ್ಲೂಕಿನ ಪ್ರತಿಭಾವಂತ ಮಕ್ಕಳಿಗೆ ಗೌರವಿಸುತ್ತಿರುವುದು ಮಾದರಿ ಕಾರ್ಯ’ ಎಂದರು.

ಶೇ 85ಕ್ಕಿಂತ ಅಧಿಕ ಅಂಕಗಳಿಸಿದ ತಾಲ್ಲೂಕಿನ ಎಸ್ಎಸ್ಎಲ್ಸಿ 250 ಹಾಗೂ ಪಿಯುಸಿ 390 ವಿದ್ಯಾರ್ಥಿಗಳು ಸೇರಿ ಒಟ್ಟು 640 ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಮಹಮ್ಮದ್ ಖಾಜಾಹುಸೇನ್, ಆದಿಲ್ ಮೊಬೈಲ್ ಅಂಗಡಿ ಮಾಲೀಕ ಮಹಮ್ಮದ್ ಮುಸ್ತಫಾ, ಮೌಲಾನ ಆಸೀಪ್, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಕೆಂಭಾವಿ, ಹಾಜಿಬಾಬಾ ಕರಡಕಲ್, ಅನ್ಸರುದ್ದಿನ್, ಜೆ ಬಾಬು ಹಟ್ಟಿ, ಅಶೋಕ್ ದಿಗ್ಗಾವಿ, ವಿಜಯಕುಮಾರ, ದೇವರಾಜ ಪಾಟೀಲ, ಪ್ರತಾಪ ರೆಡ್ಡಿ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-32-494045096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.