ಮಧುಗಿರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಅಂಕಗಳು ಫಲಿತಾಂಶದಲ್ಲಿ ನಿರ್ಧಾರಕವಾಗಿರುವುದಿಲ್ಲ ಎಂಬುದು ಸ್ವಾಗತಾರ್ಹ. ಇದು ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರಕ್ಕೆ ಮುನ್ನುಡಿಯಂತಿದೆ ಎಂದು ಅಚಲ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಪ್ರೊ.ಡಿ.ಎಸ್. ಮುನೀಂದ್ರ ಕುಮಾರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಸಚಿವರು ತೆಗೆದುಕೊಂಡ ತೀರ್ಮಾನ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದರು.

ಸಾಹಿತಿ ಮ.ಲ.ನ.ಮೂರ್ತಿ ಮಾತನಾಡಿ, ತ್ರಿಭಾಷಾ ಸೂತ್ರದ ಬಗ್ಗೆ ಐದಾರು ದಶಕಗಳಿಂದ ಶಿಕ್ಷಣ ತಜ್ಞರು ಚಿಂತಕರಲ್ಲಿ ಚರ್ಚೆನಡೆಯುತ್ತಾ ಬಂದಿದ್ದು ಕನ್ನಡ ಪರ ಸಂಘಟನೆಯ ಕೋರಿಕೆಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದರು.

ವಿಮರ್ಶಕ ಕೆ.ಪಿ ನಟರಾಜ್ ಮಾತನಾಡಿ, ಈ ಆದೇಶ ಕನ್ನಡದ ಮಕ್ಕಳ ಮೇಲಿನ ಭಾರ ಇಳಿಸುತ್ತದೆ. ಕೇವಲ ಕಲಿಕೆಯ ಭಾರ ಮಾತ್ರವಲ್ಲ, ಹಿಂದಿ ರಾಜ್ಯಗಳ ಯಜಮಾನಿಕೆಯ ಶಕ್ತಿಗಳು ಹಿಂದಿ ಮೂಲಕ ಕರ್ನಾಟಕದ ಮೇಲೆ ಹೇರಿದ ಗುಲಾಮಗಿರಿಯ ಭಾರವನ್ನು ಈ ನಿರ್ಧಾರದಿಂದ ಇಳಿಸಿದಂತಾಗುತ್ತದೆ ಎಂದರು.

ಕೆಲವು ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕಾಗಿದೆ. ಹತ್ತನೇ ತರಗತಿಗೆ ಮಾತ್ರ ಇದು ಅನ್ವಯಿಸುತ್ತದೆಯೇ? ಅಥವಾ ಮೂರನೇ ಭಾಷೆ ಕಲಿಕೆ ಆರಂಭವಾಗುವ ಆರನೇ ತರಗತಿಯಿಂದ ಆರಂಭಿಸಿ ಒಂಭತ್ತನೇ ತರಗತಿಯವರೆಗೂ ಈ ವಿಷಯದ ಅಂಕಗಳು ಪರೀಕ್ಷೆಗೆ ಪರಿಗಣಿಸಲ್ಪಡುವುದಿಲ್ಲವೇ? ಅಲ್ಲಿಯೂ ಗ್ರೇಡಿಂಗ್ ಅನುಸರಿಸಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ಅಗತ್ಯವಾಗಿದೆ ಎಂದರು.

ಪಿ.ಕೆ ರಂಗಸ್ವಾಮಿ, ಪ್ರೊ.ಕೃಷ್ಣಪ್ಪ, ವೆಂಕಟರಮಣಪ್ಪ, ನರಸಿಂಹಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-18-1182925544

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.