ಮಳವಳ್ಳಿ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 97.15ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

2025-26ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ 2,956 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 1,509 ಬಾಲಕಿಯರು ಹಾಗೂ 1,363 ಬಾಲಕರು ಉತ್ತೀರ್ಣರಾಗಿದ್ದಾರೆ. ತಾಲ್ಲೂಕಿನ ಸರ್ಕಾರಿ ಶಾಲೆಗಳು ಶೇ97.69ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಶಾಲೆಗಳಿಗೆ ಶೇ 94.24 ಹಾಗೂ ಅನುದಾನ ರಹಿತ ಶಾಲೆಗಳಿಗೆ ಶೇ 97.68ರಷ್ಟು ಫಲಿತಾಂಶ ಪಡೆದಿವೆ.

ತಾಲ್ಲೂಕಿನ ಮಾರೇಹಳ್ಳಿಯ ಆದರ್ಶ ವಿದ್ಯಾಲಯ, ಭೀಮನಹಳ್ಳಿ, ಚಿಕ್ಕಬಾಗಿಲು, ದೊಡ್ಡಭೂವಳ್ಳಿ, ಪಟ್ಟಣದ ಬಾಲಕಿಯರ ಪ್ರೌಢಶಾಲೆ (ಹೊಸದು), ಹುಸ್ಕೂರು, ಲಿಂಗಪಟ್ಟಣ, ಮಿಕ್ಕೆರೆ, ನಲ್ಲಿಗೆರೆ, ಯತ್ತಂಬಾಡಿ, ದುಗ್ಗನಹಳ್ಳಿ, ಪಟ್ಟಣದ ಪ್ರೌಢಶಾಲೆ, ನಿಟ್ಟೂರು, ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಹಳೆಯದು), ವಸತಿ ಶಾಲೆಗಳಾದ ಕಿತ್ತೂರು ರಾಣಿ ಚನ್ನಮ್ಮ, ಹಲಗೂರು, ಚನ್ನಪಿಳ್ಳೆಕೊಪ್ಪಲು, ಬಾಚನಹಳ್ಳಿ ಹಾಗೂ ಯತ್ತಂಬಾಡಿಯ ಮೊರಾರ್ಜಿ ದೇಸಾಯಿ ಮತ್ತು ಐನೂರುಹುಂಡಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳು ಹಾಗೂ 6 ಅನುದಾನಿತ ಹಾಗೂ 8 ಅನುದಾನ ರಹಿತ ಶಾಲೆಗಳು ಶೇ100 ರಷ್ಟು ಫಲಿತಾಂಶ ಪಡೆದಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-40-1288274963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.