ನಾಲತವಾಡ: ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಮುಸ್ಲಿಂ ಸಮಾಜ ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಿ, ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೂ ಆದ್ಯತೆ ನೀಡಬೇಕು ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಲಾಳೆಮಶಾಕ್ ಅವಟಿ ಹೇಳಿದರು.

ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಅಂಜುಮನ್ ಕಮಿಟಿ ವತಿಯಿಂದ ಪ್ರಸ್ತುತ ಸಾಲಿನ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪಿಯುಸಿ ನಂತರ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಲ್ಲಿಸುವ ಬದಲು, ಪಾಲಕರು ಮಕ್ಕಳ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಶಿಕ್ಷಣ ನೀಡಲು ಮುಂದಾಗಬೇಕು. ಒಂದು ಹೆಣ್ಣು ಮಗು ಶಿಕ್ಷಣವಂತಳಾದರೆ ಇಡೀ ಕುಟುಂಬವೇ ಶಿಕ್ಷಣದ ಬೆಳಕನ್ನು ಕಾಣುತ್ತದೆ ಎಂದು ಹೇಳಿದರು.

ಅಂಜುಮನ್ ಸದಸ್ಯ ಮೌಲಾಸಾಬ ರಕ್ಕಸಗಿ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಎಚ್. ಖಾಜಿ ಹಾಗೂ ಜಾಮೀಯಾ ಮಸೀದಿ ಇಮಾಮ ಮಹ್ಮದ್ ಇಸ್ಮಾಯಿಲ್ ಮುಲ್ಲಾ ಮಾತನಾಡಿದರು.

ಈ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಹ್ಮದಯೂನುಸ್ ಮೂಲಿಮನಿ ಅವರಿಗೂ ವಿಶೇಷ ಸನ್ಮಾನ ನೀಡಲಾಯಿತು.

ಅಂಜುಮನ್ ಕಮೀಟಿ ಉಪಾಧ್ಯಕ್ಷ ಬಾಷೇಸಾಬ ತೆಗ್ಗಿನಮನಿ, ಅಬ್ದುಲ್ ಗನಿ ಖಾಜಿ, ಇಬ್ರಾಹಿಂ ಮುಲ್ಲಾ, ಉಮರಫಾರುಕ್ ಮೂಲಿಮನಿ, ಲಾಲಸಾಬ ಬಿದರಕೋಟಿ, ಜಾಕೀರ ಮಾವಿನಭಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವೇಶ್ವರ ಶಾಲೆಯ ಶಿಕ್ಷಕ ಎಂ.ಎಚ್. ಕುಳಗೇರಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-26-909402900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.