ನಾಲತವಾಡ: ಸ್ಥಳೀಯ ಸರ್ಕಾರಿ ಉರ್ದು ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶ ಲಭಿಸಿದೆ.

ತೈಯ್ಯಬಾ ಮುಲ್ಲಾ ಶೇ 93.12 (ಪ್ರಥಮ), ರಿಜ್ವಾನಾ ಕಸ್ಸಾಬ ಶೇ 89.23 (ದ್ವಿತೀಯ) ಹಾಗೂ ಉಮ್ಮತಲ್ಲಾ ಜಾಸ್ಮೀನ್ ಬೆಕಿನಾಳ ಶೇ.88.8 (ತೃತೀಯ) ಅಂಕ ಗಳಿಸಿದ್ದಾರೆ.

ಪರೀಕ್ಷೆ ಬರೆದ ಎಲ್ಲ 24 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಮುಖ್ಯಶಿಕ್ಷಕ ಜಗದೀಶ ಬಸಲಿಂಗಪ್ಪ ಸಜ್ಜನ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೈಬೂಬ ಕುಳಗೇರಿ ನೇತೃತ್ವದಲ್ಲಿ ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು. ಬೀದಿ ಬದಿಯ ವ್ಯಾಪಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೈಬೂಬ ಕುಳಗೇರಿ, ಪತ್ರಕರ್ತ ಮೈಬೂಬ ಹಳ್ಳೂರ, ಮಹ್ಮದ ಇಸ್ಮಾಯಿಲ್ ಮುಲ್ಲಾ, ಎ.ಎಚ್.ಖಾಜಿ, ಬಿ.ಬಿ.ಪೂಜಾರಿ, ದಾವಲಸಾಬ ತೆಗ್ಗಿನಮನಿ, ಅಮೀರ ಹಮ್ಜೇಸಾಬ್ ಮುಲ್ಲಾ, ಕಾಸೀಂ ಹಂಡರಗಲ್, ಲಾಲಸಾಬ ಬಿದರಕೋಟಿ, ಅಕ್ಟರ್ ಬಿದರಕೋಟಿ, ಶಬಾನಾ ಬೇಗಂ ಕಿತ್ತೂರ, ರೇಶ್ಮಾ ಹಾಗೂ ಸುನಿತಾ ಕಲಾಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-26-1339321849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.