ನಾಲತವಾಡ: ಸ್ಥಳೀಯ ಕಡು ಬಡವ, ನಿತ್ಯ ಬಜಾರ ಸೇರಿದಂತೆ ಮನೆ ಮನೆಗೆ ಹೂ ಮಾರಿ ಬದುಕುವ ಆಯಗಾರ ವೃತ್ತಿಯ ಶ್ರೀಶೈಲ ಹೂಗಾರ ಇವರ ಮಗಳು ಲಕ್ಷ್ಮೀ ಹೂಗಾರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 99 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ನಾಗರಬೆಟ್ಟದ ಎಕ್ಸ್ಪರ್ಟ್ (ಆಕ್ಸ್ಫರ್ಡ್) ಮಠ ಇವರಲ್ಲಿ ಓದುತ್ತಿರುವ ಲಕ್ಷ್ಮೀಯವರಿಗೆ ಅವಿದ್ಯಾವಂತ ತಾಯಿ, ಇಂಗ್ಲಿಷ್ ಗೊತ್ತಿಲ್ಲದ ತಂದೆ, ಕಿತ್ತು ತಿನ್ನುವ ಬಡತನ ಇದೆ. ಈ ನಡುವೆ ಲಕ್ಷ್ಮೀ ಸಾಧನೆ ಮಾಡಿದ್ದಾರೆ. ಮಗಳ ಸಾಧನೆಗೆ ತಂದೆ ಶ್ರೀಶೈಲ ಹಾಗೂ ತಾಯಿ ಪಾರ್ವತಿ ಬಜಾರದ ನಡು ರಸ್ತೆಯ ತಮ್ಮ ವ್ಯಾಪಾರದ ಸ್ಥಳದಲ್ಲೇ ಮಗಳಿಗೆ ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಲಕ್ಷ್ಮೀ ಹೂಗಾರ, ‘ಇಷ್ಟೊಂದು ಅಂಕ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಂದಿನ ಶಿಕ್ಷಣ ಮುಂದುವರೆಸಿ ವೈದ್ಯೆ ಆಗುವ ಗುರಿ ಇಟ್ಟುಕೊಂಡಿರುವೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-26-784925142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.