ನರಗುಂದ: ‘ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು, ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು, ಶಿಕ್ಷಕರು ಗುರಿ ತಲುಪಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ 2026-27ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪಾಲಕರು ಮಕ್ಕಳಿಗೆ ಒತ್ತಡ ಹೇರದೇ ಮನದಾಳವನ್ನು ಅರಿಯಬೇಕು. ಒತ್ತಡದಿಂದ ಗುರಿ ಮುಟ್ಟಲು ಹೇಳಿದರೆ ಅದರಲ್ಲಿ ಯಶಸ್ಸು ಕಡಿಮೆ. ಆದ್ದರಿಂದ ವಿದ್ಯಾರ್ಥಿಗಳ ಹಿತಕಾಯಬೇಕೆಂದರು. ಎಸ್ಎಸ್ ಎಲ್ ಸಿ ಆರಂಭಿಕ ಹಂತ. ಆದರೆ ಪಿಯುಸಿ ಜೀವನದ ಮುಖ್ಯ ಘಟ್ಟವಾಗಿದೆ. ಅದನ್ನು ಶ್ರಮ ಪಟ್ಟು ಮುಗಿಸಿ ಜೀವನ ರೂಪಿಸಿಕೊಳ್ಳಬೇಕೆಂದರು. ಲಯನ್ಸ್ ಶಿಕ್ಷಣ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಗುಣಾತ್ಮಕ ಶಿಕ್ಷಣ ನೀಡಿದೆ. ಅದಕ್ಕೆ ಸಾಕ್ಷಿಯಾಗಿ ಇದೇ ಶಾಲೆಯ ವಿದ್ಯಾರ್ಥಿನಿ ಮೇಘಾ ಜೈನ್ ಐಎಎಸ್ ಪಾಸಾಗಿ ತ್ರಿಪುರದ ಜಿಲ್ಲಾಧಿಕಾರಿಯಾರಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಮುಂದಾಗಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಿಖಿತಾ ಹಿರೇಮಠ, ಕೇತನ ರಾಮಣ್ಣವರ, ಮಣಿಕಂಠ ಆನೇಗುಂದಿ, ರಿಜವಾನಾ ನದಾಫ್, ತನಿಷಾ ಪುರೋಹಿತ , ಚಂದನ ಕವಲೂರು , ಪ್ರೀತಂ ಪಟ್ಟಣಶೆಟ್ಟಿ , ಶಾರದಾ ಸವದಿ , ಶ್ರೇಯಾ ಬೇಲೇರಿ, ಶ್ರೇಯಾ ಕುರುಬಗಟ್ಟಿ, ಪಿಯುಸಿ ಯಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದ ಹಳೆಯ ವಿದ್ಯಾರ್ಥಿನಿ ಶ್ರೀನಿಕಾ ಗುಡಿಸಾಗರವರ ತಂದೆ ವೆಂಕಟೇಶ ಗುಡಿಸಾಗರವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕಾರ್ಯದರ್ಶಿ, ಡಾ.ಪ್ರಭು ನಂದಿ, ಉಪಾಧ್ಯಕ್ಷ ಉಮೇಶಗೌಡ ಪಾಟೀಲ, ಸಹಕಾರ್ಯದರ್ಶಿ ವಿಜಯಕುಮಾರ ಬೇಲೇರಿ, ನಿರ್ದೇಶಕರಾದ ಜಿ.ಟಿ.ಗುಡಿಸಾಗರ, ಜಿ.ಬಿ.ಕುಲಕರ್ಣಿ, ಬಿ.ಎಂ.ಜಾಬಣ್ಣವರ, ಸಿ.ಎಸ್.ಸಾಲೂಟಗಿಮಠ, ಎಸ್.ಎಸ್.ಪಾಟೀಲ, ಜೆ.ವಿ.ಕಂಠಿ,.ರಾಘವೇಂದ್ರ ಆನೇಗುಂದಿ, ಪ್ರಾಚಾರ್ಯ ಎಸ್.ಜಿ.ಜಕ್ಕಲಿ ಇದ್ದರು.

ಮುಖ್ಯಶಿಕ್ಷಕ ಜಿ.ಬಿ.ಹಿರೇಮಠ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-23-1603469565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.