ಪಾಂಡವಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ.7.50ರಷ್ಟು ಫಲಿತಾಂಶ ಪಡೆದಿದ್ದು, ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ.

ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 48 ಪ್ರೌಢಶಾಲೆಗಳಿದ್ದು, 2,037 ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪರೀಕ್ಷೆ ಬರೆದ್ದರು. ಈ ಪೈಕಿ 1,986 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 51 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಪಟ್ಟಣದ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಎಂ.ಆರ್.ಕೀರ್ತನಾ 625 ಅಂಕಗಳಿಗೆ 621 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮೂವರೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ತಾಲ್ಲೂಕಿನ 17 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.

23 ಶಾಲೆಗಳಿಗೆ ಶೇ100 ಫಲಿತಾಂಶ: ತಾಲ್ಲೂಕಿನಲ್ಲಿ 23 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಈ ಪೈಕಿ ಸರ್ಕಾರಿ ಪ್ರೌಢಶಾಲೆಗಳಾದ ಬೆಳ್ಳಾಳೆ, ಮೂಡಲಕೊಪ್ಪಲು, ಚಿಟ್ನಹಳ್ಳಿ, ಅರಳಕುಪ್ಪೆ, ಹಿರೇಮರಳಿ, ಚಿನಕುರಳಿ ಸರ್ಕಾರಿ ಕೆಪಿಎಸ್ ಶಾಲೆ ಶೇ100ರಷ್ಟು ಫಲಿತಾಂಶ ಪಡೆದಿವೆ. ಸರ್ಕಾರಿ ವಸತಿ ಶಾಲೆಗಳಲ್ಲಿ ಮೂಡಲಕೊಪ್ಪಲು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಉಳಿಗೆರೆ, ಬೇಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಹದೇಶ್ವಪುರ ಅಂಬೇಡ್ಕರ್ ವಸತಿ ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ.

ಅನುದಾನಿತ ರಹಿತ ಖಾಸಗಿ ಶಾಲೆಗಳಲ್ಲಿ ಬಿಜಿಎಸ್ ಪಾಂಡವಪುರ, ಬಡ್ಸ್ ಪಾಂಡವಪುರ, ಎಸ್ಇಟಿ ಮೇಲುಕೋಟೆ, ಜ್ಞಾನವಿಕಾಸ ಚಿನಕುರಳಿ, ಜೆಬಿಇಟಿ ಚಿನಕುರಳಿ, ಶಂಭೂಲಿಂಗೇಶ್ವರ ಶಾಲೆ ಜಯಂತಿ ನಗರ, ಸ್ಟ್ಯಾನ್ ಪೋರ್ಡ್ ಕ್ಯಾತನಹಳ್ಳಿ, ಡಿಎಂಎಸ್ ಬೇಬಿ, ವಿನಾಯಕ ಶಾಲೆ ಕೆ.ಬೆಟ್ಟಹಳ್ಳಿ, ಗುಲಾಬಿ ಶಾಲೆ ರಾಗಿಮುದ್ದನಹಳ್ಳಿ, ಕುವೆಂಪು ಶಾಲೆ ಕುಂತಿಬೆಟ್ಟ, ರೋಟರಿ ಶಾಲೆ ಪಾಂಡವಪುರ ಹಾಗೂ ಅನುದಾನಿತ ಶಾಲೆ ವಿಶ್ವೇಶ್ವರಯ್ಯ ಪ್ರೌಢಶಾಲೆ ಕ್ಯಾತನಹಳ್ಳಿ ಇವುಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ ಎಂದು ಬಿಇಒ ಧರ್ಮಶೆಟ್ಟಿ ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-40-1926921152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.