ರಬಕವಿ–ಬನಹಟ್ಟಿ: ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಜೀವನ ದಲ್ಲಿ ಸತತ ಪರಿಶ್ರಮದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದು ಇಲ್ಲಿನ ಜ್ಞಾನೋದಯ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯಾ ಧ್ಯಕ್ಷ ಪರಪ್ಪ ಬಿಳ್ಳೂರ ತಿಳಿಸಿದರು.

ಅವರು ಶುಕ್ರವಾರ ಸಮೀಪದ ರಾಂಪುರದ ಜ್ಞಾನೋದಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಶಾಲೆಯ ಆಡಳಿತಾಧಿಕಾರಿ ಏಕನಾಥ ಗಂಥಡಿ ಮಾತನಾಡಿ, ಶಾಲೆಯ ಸ್ಫೂರ್ತಿ ಕೊಣ್ಣೂರ ಶೇ 97.92 ರಷ್ಟು ಅಂಕಗಳೊಂದಿಗೆ ಪ್ರಥಮ, ಗೌರಿ ಕೊಣ್ಣೂರ ಶೇ 95.68 ರಷ್ಟು ಅಂಕಗಳೊಂದಿಗೆ ದ್ವಿತೀಯ ಮತ್ತು ಶ್ರೇಯಸ್ಸ ಬಿಳ್ಳೂರ ಶೇ 95.36 ಅಂಕ ಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

13 ವಿದ್ಯಾರ್ಥಿಗಳಿ ಡಿಸ್ಟಿಂಕ್ಷನ್, 8 ವಿದ್ಯಾರ್ಥಿಗಳು ಪ್ರಥಮ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಬರಗಿ, ವಿವೇಕಾನಂದ ಭಸ್ಮೆ, ಚಂದ್ರ ಕಾಂತ ಕೆಳಗಿಮನಿ, ಸುರೇಶ ಗೊಲಭಾವಿ ಮುಖ್ಯ ಶಿಕ್ಷಕ ಕೃಷ್ಣಾ ತಳವಾರ ಸೇರಿದಂತೆ ಅನೇಕರು ಇದ್ದರು.

ಕುಳಗೇರಿ ಕ್ರಾಸ್: ಸಮೀಪದ ಬೆಳವಲ ಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಸಕ್ತ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಶೇ 100 ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಭಾರ ಮುಖ್ಯಶಿಕ್ಷಕಿ ಎಸ್.ಎಂ.ಕಾಶೆಟ್ಟಿ ತಿಳಿಸಿದ್ದಾರೆ.

ಆಕಾಶ ಯರಗೊಪ್ಪ ಶೇ 95.4 ಪ್ರಥಮ, ವಿನಯಕುಮಾರ ಹೊಸಮಠ ಶೇ 91.20 ದ್ವಿತೀಯ, ತುಳಸಪ್ಪ ಮಾದರ ಶೇ 88.32 ತೃತೀಯ ಸ್ಥಾನ ಪಡೆದು ಕೊಂಡು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ಸ್ಥಳಿಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವಾಸುರಾಜ ಬಾವಿ ಹಾಗೂ ಸಮಿತಿ ಸದಸ್ಯರು, ಗ್ರಾಮದ ಗುರು-ಹಿರಿಯರು, ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.

ಹಕ್ಕಾಪಕ್ಕಿ ಶಾಲೆಗೆ ಶೇ 88ರಷ್ಟು ಫಲಿತಾಂಶ

ಕುಳಗೇರಿ ಕ್ರಾಸ್: ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಬಾದಾಮಿಯ ಅಂಗ ಸಂಸ್ಥೆಯಾದ ಕುಳಗೇರಿ ಕ್ರಾಸ್ ಜಿ.ಜಿ.ಹಕ್ಕಾಪಕ್ಕಿ ಪ್ರೌಢಶಾಲೆಯ ಪ್ರಸಕ್ತ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಶೇ 88 ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಭಾರ ಮುಖ್ಯಶಿಕ್ಷಕ ಪಿ.ವಿ.ಜಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅರುಣ ಸಿದ್ದಪ್ಪ ಪೂಜಾರ ಶೇ 84 ಪ್ರಥಮ, ಚೈತ್ರಾ ರುದ್ರಪ್ಪ ಪೂಜಾರ ಶೇ 82.56 ದ್ವಿತೀಯ, ವೈಷ್ಣವಿ ಬಸವರಾಜ ತಳವಾರ (ಶೇ 82.24) ತ್ರತೀಯ ಸ್ಥಾನ ಪಡೆದುಕೊಂಡು ಆಯ್ಕೆಯಾದ ವಿದ್ಯಾರ್ಥಿಗಳನ್ನು ಸ್ಥಳಿಯ ಶಾಲಾ ಸುಧಾರಣಾ ಸಮಿತಿ ಚೇರಮನ್ ವಿ.ಎಸ್.ಮಿಟ್ಲಕೋಡ ಹಾಗೂ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

ಬಾದಾಮಿ: ಬೇಲೂರು ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 97.45 ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಶಿಕ್ಷಕ ತಿಳಿಸಿದ್ದಾರೆ.

ಶಾಲೆಗೆ ಪೂಜಾ ಕುರಿ ಶೇ 97.92 (ಪ್ರಥಮ), ಹರ್ಷಿತಾ ಪೂಜಾರ ಶೇ 95.2 (ದ್ವಿತೀಯ), ಶ್ರಾವಣಿ ಪಾಟೀಲ ಶೇ 95.04 (ತೃತೀಯ) ಸ್ಥಾನ ಪಡೆದಿದ್ದಾರೆ.

ಬೀಳಗಿ: ತಾಲ್ಲೂಕಿನ ಕುಂದರಗಿ ರಾಮಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

ವಿಠ್ಠಲ ಭಜಂತ್ರಿ ಶೇ 95.20, ಅನನ್ಯ ಮಮದಾಪುರ ಶೇ92.96 ಮತ್ತು ಸುನಿತಾ ದೇಶಭಾಗ ಶೇ 91.68 ರಷ್ಟು ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್ ಬಿ.ಬಿ.ಖೋತ, ಪ್ರೌಢಶಾಲೆಯ ಚೇರ್ಮನ್ ಬಿ.ಟಿ.ಪಾಟೀಲ, ನಿರ್ದೇಶಕರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ಮಹಾಲಿಂಗಪುರ: ಸಮೀಪದ ಕೆಸರ ಗೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 91.91 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 136 ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸವಿತಾ ಪೂಜೇರಿ ಶೇ 98.08 (ಪ್ರಥಮ), ಅರುಣ ದಡ್ಡಿಮನಿ ಶೇ 95.68 (ದ್ವಿತೀಯ), ಭಾಗ್ಯಶ್ರೀ ಸತ್ತಿಗೇರಿ ಶೇ 94.88 (ತೃತೀಯ), ನೇತ್ರಾ ತಿಪ್ಪನ್ನವರ ಶೇ 94.72, ವಿಠ್ಠಲ ಕಪರಟ್ಟಿ ಶೇ 94.04, ಅಕ್ಷತಾ ಭದ್ರಶೆಟ್ಟಿ ಶೇ 93.92, ಕಾವ್ಯಾ ಮೋಪಗಾರ ಶೇ 93.44, ಗೌರವ್ವ ಬನಾಜ ಶೇ ಶೇ 92.64, ಸುನಂದಾ ತಿಪ್ಪನ್ನವರ ಶೇ 91.36, ಭೂಮಿಕಾ ಬ್ಯಾಕೋಡ, ಲಕ್ಷ್ಮೀ ಮಾದರ ತಲಾ ಶೇ 91.04 ರಷ್ಟು ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಸಿ.ವಿ.ಚೌಧರಿ ತಿಳಿಸಿದ್ದಾರೆ.

ಮಹಾಲಿಂಗಪುರ: ಸಮೀಪದ ಸಂಗಾ ನಟ್ಟಿ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 96.77 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಕುಳಿತ 62 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಕ್ಷಿತಾ ನಾಗನೂರ, ರಮ್ಯ ಪೂಜೇರಿ ತಲಾ ಶೇ 97.44 (ಪ್ರಥಮ), ಶೃತಿ ನಾಗನೂರ ಶೇ 96.64 (ದ್ವಿತೀಯ), ಪವಿತ್ರ ನಾಗನೂರ ಶೇ 95.68 (ತೃತೀಯ) ರಷ್ಟು ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಎಸ್.ಬಿ.ಮಲಾಬಾದಿ ತಿಳಿಸಿದ್ದಾರೆ.

ಕೆಎಲ್ಇ ಶಾಲೆಗೆ ಶೇ 94.25 ಫಲಿತಾಂಶ

ಮಹಾಲಿಂಗಪುರ: ಪಟ್ಟಣದ ಕೆಎಲ್ಇ ಸಂಸ್ಥೆಯ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 94.25ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 174 ವಿದ್ಯಾರ್ಥಿಗಳಲ್ಲಿ 164 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜೈರಾಬಿ ನಾಲಬಂದ ಶೇ 96.48 (ಪ್ರಥಮ), ಮುತ್ತು ಕಂಠಿ ಶೇ 96.16 (ದ್ವಿತೀಯ) ಹಾಗೂ ಶ್ರದ್ಧಾ ಬೇವಿನಗಿಡದ, ಅನಿತಾ ಕಂಠಿ ತಲಾ ಶೇ 92.48 (ತೃತೀಯ), ಇಂಚರಾ ವಲ್ಲ್ಯಾಪುರ ಶೇ 91.84 ರಷ್ಟು ಅಂಕ ಪಡೆದಿದ್ದಾರೆ ಎಂದು ಉಪ ಪ್ರಾಚಾರ್ಯ ಬಿ.ಎನ್.ಅರಕೇರಿ ತಿಳಿಸಿದ್ದಾರೆ.

ಬಾದಾಮಿ: ಸಮೀಪದ ಚಿಕ್ಕಮುಚ್ಚಳಗುಡ್ಡ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ನೂರಕ್ಕೆ ನೂರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಶಂಕರರಾವ್ ಕುಲಕರ್ಣಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಸಂಪ್ರೀತಾ ಗಾರವಾಡ ಶೇ 98.88 ಅಂಕ ಪಡೆದು ತಾಲ್ಲೂಕಿಗೆ ದ್ವಿತೀಯ, ನಿಶ್ಚಿತಾ ಫತ್ತೇಪೂರ ಶೇ 98.73 ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಚಿನ್ಮಯಿ ಕೆರೂರ ಶೇ 98.24 ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯಪುರ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಟ್ಟಂಗಿ ಹಾಳದ ಎಕ್ಸಲಂಟ್ ಆಂಗ್ಲ್ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದು ಶಾಲೆಗೆ ಶೇ.98.06 ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 463 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆ ದಿದ್ದಾರೆ. ಹಾಗೂ 145 ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 211 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-1282946341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.