ರಾಣೆಬೆನ್ನೂರು: ಜೀವನದಲ್ಲಿ ಪ್ರಾಮಾಣಿಕತೆ, ಸಮಯ ಪಾಲನೆ, ವಿಶ್ವಾಸಾರ್ಹತೆ, ಸತತ ಪರಿಶ್ರಮ, ಶ್ರದ್ಧೆ, ಕೌಶಲ ಬಹಳ ಮುಖ್ಯ. ಇವುಗಳಿದ್ದರೆ ಯಶಸ್ಸು, ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ವಾಗೀಶನಗರದ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಶನಿವಾರ ಕೆ.ಬಿ. ಕೋಳಿವಾಡ ಚಾರಿಟೆಬೆಲ್ ಟ್ರಸ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. ದ್ವಿತೀಯ ಪಿಯುಸಿಯ 19 ಜನರಿಗೆ ಟ್ಯಾಬ್ಗಳನ್ನು ನೀಡಲಾಗಿದೆ. ಕೇವಲ ಓದಿನಿಂದ ಅಂಕಗಳಿಂದ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸ್ಪೋಕನ್ ಇಂಗ್ಲಿಷ್ ಮತ್ತು ಕೌಶಲ್ಯ ಬಹಳ ಮುಖ್ಯ. ನಾವು ಕಲಿತ ವಿದ್ಯೆ ಸಮಾಜ ಮುಖಿ ಇರಬೇಕು. ಪ್ರತಿಭಾ ಪುರಸ್ಕಾರವನ್ನು ಸದುಪಯೋಗ ಪಡಿಸಿಕೊಂಡು ನಾಡಿಗೆ ಕೊಡುಗೆಯಾಗಬೇಕು ಎಂದರು.

ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಅಭಿರುಚಿ, ಆಸಕ್ತಿ, ಪರಿಣತಿ ಗುರುತಿಸಿ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ಪ್ರತಿ ವರ್ಷ ನಮ್ಮ ಚಾರಿಟೆಬೆಲ್ ಟ್ರಸ್ಟ್ನಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಬಿ.ನಂದ್ಯಾಲ ಅವರು ಉಪನ್ಯಾಸ ನೀಡಿದರು.

ಎಸ್ಎಸ್ಎಲ್ಸಿಯಲ್ಲಿ ಚಂದನ ಲಕ್ಷ್ಮಣ ಗೋಣಿಮಠ, ದಿವ್ಯಾ ನಾಗೇಶ ತುಮಕೂರ, ಸುಶ್ಮಾ ಸುಭಾಸ ಅಳಲಗೇರಿ ಮತ್ತು ಕವನಾ ಬಿ. ಕೋಲಾಟಿ ಮತ್ತು ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಶಿವಕುಮಾರ ಕುಮ್ಮೂರ, ಸುಮಾ ರಾಮಣ್ಣನವರ, ಲಕ್ಷ್ಮಿ ಕೋಟಿ, ಶಿವಲೀಲಾ ಮಳ್ಳೂರ, ದೀಕ್ಷಾ ಎಂ, ಅಭಯ ಕೊಪ್ಪದ, ಸಂಜನಾ ಬದಾಮಿ, ಅನನ್ಯಾ ಪರಮೇಶ್ವರನ್, ಶಂಭುಲಿಂಗ ಸುಂಕದ, ವೆಂಕಟೇಶ ಅಕ್ಕೂರ, ನಾಯಲಖಾನ್ ಎಚ್.ಎಸ್, ನೇಹಾ ಹಳ್ಳಿಯವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟಪ್ಪ ಮಾರಿಯಮ್ಮನವರ, ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಪ್ಪ ಬೇಡರ, ಸಣ್ಣ ತಮ್ಮಪ್ಪ ಬಾರ್ಕಿ, ನೀಲಕಂಠಪ್ಪ ಕುಸಗೂರ, ಕೃಷ್ಣ್ಣಪ್ಪ ಕಂಬಳಿ, ದಿಳ್ಳೆಪ್ಪ ಅಣ್ಣೇರ, ಸೀತಾರಾಮರಡ್ಡಿ, ತಿರುಪತಿ ಅಜ್ಜನವರ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಯಕ, ಬಿಆರ್ಪಿ ಗಂಗಪ್ಪ ನಾಯಕ, ಎಂ.ಎಂ. ಮಾಗನೂರು ಹಾಗೂ ಕೋಳಿವಾಡ ಅಭಿಮಾನಿಗಳು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-22-1484232365

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.