ರಾಣೆಬೆನ್ನೂರು: ಇಲ್ಲಿನ ಉಮಾಶಂಕರ ನಗರದ ಆಟೊ ಚಾಲಕ ನಾಗರಾಜ ನರಸಪ್ಪ ಆರೇರ ಅವರ ಪುತ್ರಿ ಆಶಾ ಆರೇರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 93.06 ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಹಳೇ ಪಿ.ಬಿ.ರಸ್ತೆಯ ಬಳಿ ಇರುವ ಎನ್.ಆರ್.ಸಂಕೇತ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕನ್ನಡ 98, ಇಂಗ್ಲೀಷ 119, ಹಿಂದಿ 97, ಗಣಿತ 95, ವಿಜ್ಞಾನ 85 ಮತು ಸಮಾಜ ವಿಜ್ಞಾನ 91 ಸೇರಿ ಒಟ್ಟು 585 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಕುಟುಂಬಕ್ಕೆ ಆಟೊದಿಂದ ಬರುವ ಆದಾಯವೇ ಆಧಾರವಾಗಿದ್ದು, ಇದರ ನಡುವೆಯೂ ಪುತ್ರಿಯನ್ನು ಓದುವುದಕ್ಕೆ ನಾಗರಾಜ ಪ್ರೋತ್ಸಾಹಿಸಿದ್ದಾರೆ. ಆಶಾ ಆರೇರ ಅವರು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಕೈಗೊಂಡು ಉತ್ತಮ ಅಂಕಗಳನ್ನು ಪಡೆದು ತಂದೆ–ತಾಯಿ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.

‘ನಮ್ಮ ತಂದೆ ನಾಗರಾಜ ಮತ್ತು ತಾಯಿ ರಾಧಾ ಅವರ ಶ್ರಮವೇ ನನಗೆ ಪ್ರೇರಣೆಯಾಗಿದೆ. ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದೆ. ಬೆಳಿಗ್ಗೆ ಬೇಗ ಎದ್ದು ಓದುತ್ತಿದ್ದೆ. ಮುಂದೆ ಪಿಯುಸಿ ವಿಜ್ಞಾನದಲ್ಲಿ ಓದಿ ವೈದ್ಯಳಾಗುವ ಕನಸು ಹೊಂದಿದ್ದೇನೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-22-217249418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.