ಶಿರಸಿ: ನಗರದ ಯೂನಿಯನ್ ಪ್ರೌಢಶಾಲೆ ವಿದ್ಯಾರ್ಥಿನಿ ಲೀಜಾ ಖಾನಮ್ ಅವರ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಂಟಾಗಿದ್ದ ಅಂಕಪಟ್ಟಿ ಗೊಂದಲವನ್ನು ಪರೀಕ್ಷಾ ಮಂಡಳಿಯು ಸರಿಪಡಿಸಿದೆ.

ಲೀಜಾ ಅವರು ಸಮಾಜ ವಿಜ್ಞಾನ ಪರೀಕ್ಷೆಗೆ ಗೈರಾಗಿದ್ದಾರೆ ಎಂಬ ಮಾಹಿತಿ ಗುರುವಾರದ ಫಲಿತಾಂಶದಲ್ಲಿ ಇತ್ತು. ಪರೀಕ್ಷೆ ಬರೆದಿದ್ದು ದೋಷ ಸರಿಪಡಿಸುವಂತೆ ಶಾಸಕ ಭೀಮಣ್ಣ ನಾಯ್ಕ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿನಿಯ ಪೋಷಕರು ಕೋರಿದ್ದರು. ಇದರ ಬಗ್ಗೆ ಶಾಸಕರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದರು.

‘ಮಂಡಳಿ ಈಗ ದೋಷ ಸರಿಪಡಿಸಿದೆ. ಪರಿಷ್ಕೃತ ಫಲಿತಾಂಶ ಪ್ರಕಟಿಸಿದೆ. ಸಮಾಜ ವಿಜ್ಞಾನಕ್ಕೆ ಶೇ 97ರಷ್ಟು ಅಂಕ ಬಂದಿದೆ’ ಎಂದು ವಿದ್ಯಾರ್ಥಿನಿ ಲೀಜಾ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-137858906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.