ಸಿಂಧನೂರು: ‘ಹಲವಾರು ವಿದ್ಯಾರ್ಥಿಗಳು ಬಹಳಷ್ಟು ಓದುತ್ತಾರೆ. ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗುತ್ತಾರೆ. ಓದಿದ ಪಠ್ಯವಿಷಯವನ್ನು ಒಂದು ಬಾರಿ ಬರೆದರೆ ಸದಾಕಾಲ ನೆನಪಿನಲ್ಲಿ ಉಳಿಯುತ್ತದೆ’ ಎನ್ನುತ್ತಾರೆ ಎಸ್ಎಸ್ಎಲ್ಸಿಯಲ್ಲಿ ಅಧಿಕ ಅಂಕ ಪಡೆದ ಎಂಡಿಎನ್ ಫ್ಯೂಚರ್ ಪ್ರೌಢ ಶಾಲೆಯ ವಿದ್ಯಾರ್ಥಿ ನಿಖಿಲ್ ಮೇಟಿ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ಎರಡನೇ ಸ್ಥಾನ ಮತ್ತು ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿ ಉತ್ತೀರ್ಣರಾಗಿರುವ ನಿಖಿಲ್ ಮೇಟಿ ಹೇಳುವ ಅನುಭವದ ಮಾತು ಇದು.

‘ಹಗಲು-ರಾತ್ರಿ ಸದಾ ಪುಸ್ತಕ ಹಿಡಿದುಕೊಂಡು ಓದಿದರೆ ಹೆಚ್ಚಿನ ಅಂಕಗಳು ಲಭಿಸುತ್ತವೆ ಎನ್ನುವುದು ಶುದ್ಧ ತಪ್ಪು. ನಾವು ಏನನ್ನು ಓದುತ್ತೇವೆಯೋ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರತಿನಿತ್ಯ ತರಗತಿಗೆ ಹಾಜರಾಗಬೇಕು. ಅಂದು ಹೇಳಿದ ಪಾಠವನ್ನು ಅದೇ ದಿನವೇ ಮನೆಯಲ್ಲಿ ಓದಿಕೊಳ್ಳಬೇಕು. ಈ ವಿಧಾನದಲ್ಲಿ ಅಭ್ಯಾಸ ಮಾಡಿದರೆ ಒಂದೆರಡು ತಾಸು ಓದಿದರೆ ಸಾಕು ಅಧಿಕ ಅಂಕಗಳನ್ನು ಪಡೆಯಬಹುದು’ ಎಂದು ನಿಖಿಲ್ ಮೇಟಿ ಹೇಳಿದರು.

‘ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ನಾನು ಓದುತಿದ್ದೆ. ಶಾಲೆಯಲ್ಲಿ ಎಲ್ಲ ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡಿದ್ದಾರೆ. ಮೇಲಿಂದ ಮೇಲೆ ಪರೀಕ್ಷಾ ದೃಷ್ಟಿ ಯಿದ ಹೇಳಿದ ವಿಷಯವನ್ನು ಪುನರಾವರ್ತನೆಗೊಳಿಸಿದ್ದಾರೆ. ಹೀಗಾಗಿ ಹೆಚ್ಚಿನ ಅಂಕಗಳನ್ನು ಪಡೆಯಲು ನನಗೆ ಅನುಕೂಲವಾಯಿತು’ ಎಂದು ಮೇಟಿ ತಿಳಿಸಿದರು.

ಐಐಟಿ ಒಲವು: ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಓದುವ ಮೂಲಕ ಐಐಟಿ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ ಆ ಮೂಲಕ ಉನ್ನತ ದರ್ಜೆಯ ಎಂಜಿನಿಯರ್ ಆಗಿ ವಿಜ್ಞಾನಿಯಾಗುವ ಇಚ್ಛೆ ಹೊಂದಿರುವುದಾಗಿ ನಿಖಿಲ್ ಮೇಟಿ ತಮ್ಮ ಜೀವನದ ಗುರಿ ಕುರಿತು ತಿಳಿಸಿದರು.

ಸಿಂಧನೂರಿನ ಪಟೇಲ್ವಾಡಿಯ ಪಂಪನಗೌಡ ಮೇಟಿ ಮತ್ತು ಕಾವ್ಯ ಅವರ ಪುತ್ರ ಅತ್ಯಧಿಕ ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಿಖಿಲ್ ಅವರ ತಂದೆ ಪಂಪನಗೌಡ ಐಟಿಐ ಅಭ್ಯಾಸ ಮಾಡಿದ್ದು, ತಾಯಿ 10ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಸ್ವಂತ ಸಾಮರ್ಥ್ಯದಿಂದಲೇ 6ನೇ ತರಗತಿಯಿಂದ ಅಭ್ಯಾಸ ಮಾಡುತ್ತಿರುವ ನಿಖಿಲ್ ಎಸ್ಎಸ್ಎಲ್ಸಿಯಲ್ಲಿ ಕನ್ನಡ, ವಿಜ್ಞಾನ, ಸಾಮಾನ್ಯ ವಿಜ್ಞಾನ, ಹಿಂದಿಯಲ್ಲಿ 100ಕ್ಕೆ 100, ಇಂಗ್ಲೀಷ್-124, ಗಣಿತ-98 ಒಟ್ಟು 622 ಅಂಕಗಳನ್ನು ಪಡೆಯುವುದು ಸರಳವಾದ ಸಾಧನೆಯಲ್ಲ ಎಂದು ಆಶ್ವರ್ಯ ವ್ಯಕ್ತಪಡಿಸುತ್ತಾರೆ ಸಿವಿಲ್ ಎಂಜನಿಯರ್ ವಿ.ಸಿ.ಪಾಟೀಲ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-32-1706484443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.