ಸುರಪುರ: ‘ತಾಲ್ಲೂಕಿಗೆ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 92.74 ರಷ್ಟು ಫಲಿತಾಂಶ ಬಂದಿದೆ. ಒಟ್ಟು 98 ಶಾಲೆಗಳಿಂದ 2,145 ಬಾಲಕರು, 2,304 ಬಾಲಕಿಯರು ಸೇರಿ ಒಟ್ಟು 4,449 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 1922 ಬಾಲಕರು, 2,204 ಬಾಲಕಿಯರು ಒಟ್ಟು 4,126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 95.66 ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ 89.60 ರಷ್ಟಿದೆ. ಗ್ರಾಮೀಣ ಭಾಗದ ಫಲಿತಾಂಶ ಶೇ 93, ನಗರ ಪ್ರದೇಶಕ್ಕಿಂತ (ಶೇ 90) ಉತ್ತಮವಾಗಿದೆ. ಅನುದಾನಿತ (ಶೇ 91.34), ಅನುದಾನ ರಹಿತ (ಶೇ 92.41) ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಶೇ 92.96 ರಷ್ಟು ಫಲಿತಾಂಶ ಪಡೆದು ಮುಂಚೂಣಿಯಲ್ಲಿವೆ. 23 ಶಾಲೆಗಳು ಪ್ರತಿಶತ ಶೇ 100 ರಷ್ಟು ಫಲಿತಾಂಶ ದಾಖಲಿಸಿದ್ದು ಇದರಲ್ಲಿ 12 ಸರ್ಕಾರಿ ಶಾಲೆಗಳು ಸೇರಿವೆ’ ಎಂದರು.

ನೋಡಲ್ ಅಧಿಕಾರಿ ಶರಣಬಸವ ಗಚ್ಚಿನಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭೀಮರಾಯ ಗೋನಾಲ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಖಾದರ್ ಪಟೇಲ, ಕೊಟ್ರೇಶ್ ಕೋಳೂರು, ಸಿದ್ದಪ್ಪ ಹೊಸಗೌಡ್ರು ಉಪಸ್ಥಿತರಿದ್ದರು.

ಕಠಿಣ ಪರಿಶ್ರಮ: ಜೂನ್ ತಿಂಗಳಿನಿಂದಲೇ ಆರಂಭಿಸಿದ ವಿಶೇಷ ತರಗತಿಗಳು, ಬಾಗಿಲು ಮುಚ್ಚದ ಶಾಲೆಗಳು (ರಾತ್ರಿ ಶಾಲೆಗಳು), ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ಮಿಷನ್ 40 ಪ್ಲಸ್ ಯೋಜನೆಗಳು ಅತ್ಯುತ್ತಮ ಫಲಿತಾಂಶ ಬರಲು ಕಾರಣವಾದ ಪ್ರಮುಖ ಯೋಜನೆಗಳಾಗಿವೆ. ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳು ಮತ್ತು ಬ್ಲೂಪ್ರಿಂಟ್ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸವು ವಿದ್ಯಾರ್ಥಿಗಳಿಗೆ ಸಹಕಾರಿಯಾಯಿತು. ಕಳೆದ ವರ್ಷ ಶೇ 47.21 ರಷ್ಟು ಫಲಿತಾಂಶ ಬಂದಿತ್ತು ಈ ವರ್ಷ ಶೇ 92.84 ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಯಲ್ಲಪ್ಪ ಕಾಡ್ಲೂರು ಹರ್ಷ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-30-1502411247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.