ಯಾದಗಿರಿ: ಗುರುಮಠಕಲ್ನ ಜಿ. ಶ್ರೀನಿವಾಸ ರೆಡ್ಡಿ ಮೆಮೊರಿಯಲ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರೇರಣಾ ಶರಣಬಸಪ್ಪ ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 622 (ಶೇ 99.52) ಅಂಕಗಳು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

‘ತರಗತಿಯಲ್ಲಿ ಶಿಕ್ಷಕರು ಹೇಳಿದ್ದ ಪಾಠವನ್ನು ಅದೇ ದಿನ ಓದಿ, ನಿತ್ಯ ಕಠಿಣ ಶ್ರಮವಹಿಸಿ ಅಧ್ಯಯನ ಮಾಡಿದ್ದರಿಂದ ಶೇ 99.52ರಷ್ಟು ಫಲಿತಾಂಶ ಬಂದಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪಿಯು ಕಾಲೇಜಿನಲ್ಲಿ ವಿಜ್ಞಾನ ತೆಗೆದುಕೊಂಡು, ಎಂಬಿಬಿಎಸ್ ಓದಿ, ಮುಂದೆ ಐಎಎಸ್ ಓದುವ ಇಚ್ಛೆ ವ್ಯಕ್ತಪಡಿಸಿದ್ದಾಳೆ’ ಎನ್ನುತ್ತಾರೆ ಪ್ರೇರಣಾ ತಾಯಿ ಅಮೃತಾ.

ಲೈನ್ ಮ್ಯಾನ್ ಪುತ್ರನಿಗೆ ಐಐಟಿ ಆಸೆ: ರೈಲ್ವೆ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿರುವ ಮನೋಜ್ಕಮಾರ್ ಸಿಂಗ್ ಪುತ್ರ ಅಂಕಿತ್ ರಾಜ್ 625ಕ್ಕೆ 621 (ಶೇ 99.36) ಅಂಕಗಳಿಸಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾರೆ.

ನಗರದ ಮಹಾತ್ಮ ಗಾಂಧಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ್ದು, ತನ್ನ ಪ್ರತಿಭೆಯಿಂದಾಗಿ ಕಲಬುರಗಿಯ ಎಸ್ಬಿಆರ್ ವಿಜ್ಞಾನ ಕಾಲೇಜಿನ ಪ್ರವೇಶ ಪರೀಕ್ಷೆ ಮೂಲಕ ಉಚಿತ ಸೀಟು ಗಿಟ್ಟಿಸಿಕೊಂಡಿದ್ದಾನೆ. ಮುಂಬೈನಲ್ಲಿ ಐಐಟಿಯಲ್ಲಿ ಎಂಜಿನಿಯರಿಂಗ್ ಮುಗಿಸು ಆಸೆ ಇರಿಸಿಕೊಂಡಿದ್ದಾನೆ ಅಂಕಿತ್.

ರೈತನ ಪುತ್ರನಿಗೆ ವೈದ್ಯಕೀಯ ಕನಸು: ಗುರುಮಠಕಲ್ ತಾಲ್ಲೂಕಿನ ವಂಕಸಂಬ್ರದ ರೈತ ಬಷೀರ್ ಅಹಮ್ಮದ್ ಅವರ ಪುತ್ರ ಆರೀಫ್, 625ಕ್ಕೆ 620 (ಶೇ 99.20) ಅಂಕ ಪಡೆದು ಜಿಲ್ಲೆಗೆ 3ನೇ ಸ್ಥಾನ ಗಳಿಸಿದ್ದಾರೆ.

ಸೈದಾಪುರದ ಭಗವಾನ ಮಹಾವೀರ ಪ್ರೌಢಶಾಲೆಯ ಆರೀಫ್, ಶಾಲೆಯಲ್ಲಿ ಶಿಕ್ಷಕರು ಹೇಳಿದ್ದನ್ನು ಚಾಚೂತಪ್ಪದೆ ಪಾಲನೆ ಮಾಡುತ್ತಿದ್ದ. ವೇಳಾ ಪಟ್ಟಿಹಾಕಿಕೊಂಡು ಅಧ್ಯಯನ ಮಾಡಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

‘ಪೋಷಕರ ಬೆಂಬಲ, ಶಿಕ್ಷಕರು ನೀಡಿದ್ದ ಮಾರ್ಗದರ್ಶನದಿಂದ ಒಳ್ಳೆಯ ಫಲಿತಾಂಶ ಬಂದಿದೆ. ಪಿಸಿಎಂಬಿ ತೆಗೆದುಕೊಂಡು ಎಂಬಿಬಿಎಸ್ ಮಾಡುವ ಇಚ್ಛೆ ಇದೆ’ ಎನ್ನುತ್ತಾರೆ ಆರೀಫ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-30-212098447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.